*ಚೂರುಪಾರು

Contributed bygvittalslb@gmail.com|Vijaya Karnataka
preparatory meeting public auction and direct interview for various programs in koppal
ಪೂರ್ವಭಾವಿ ಸಭೆ

ಕೊಪ್ಪಳ: ಜಿಲ್ಲಾಕೇಂದ್ರದಲ್ಲಿನುಲಿಯ ಚಂದಯ್ಯ ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ನಿಮಿತ್ತ ಸಿದ್ಧತೆ ಕೈಗೊಳ್ಳಲು ಆ.18 ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಪೂರ್ವಭಾವಿ ಸಭೆ ನಡೆಯಲಿದೆ.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಭೆಯ ಅಧ್ಯಕ್ಷತೆ ವಹಿಸುವರು. ಜಿಲ್ಲಾಮಟ್ಟದ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಸಮಾಜದ ಮುಖಂಡರು ಆಗಮಿಸಿ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ತಿಳಿಸಿದ್ದಾರೆ.

---

ಬಹಿರಂಗ ಹರಾಜು

ಕೊಪ್ಪಳ: ತಾಲೂಕಿನಲ್ಲಿಈವರೆಗೆ ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿಯನ್ನು ಆ.25ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಕೊಪ್ಪಳ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ತಿಳಿಸಿದ್ದಾರೆ.

ಒಎಂಎಸ್ ಎಸ್ ಡಿ ದರದಲ್ಲಿಆ.25ರಂದು ಬೆಳಗ್ಗೆ 11ಕ್ಕೆ ಕೆಎಫ್ ಸಿಎಸ್ ಸಿ ಸಗಟು ಮಳಿಗೆಯಲ್ಲಿಬಹಿರಂಗ ಹರಾಜು ಮಾಡಲಾಗುವುದು. ಆಸಕ್ತಿಯುಳ್ಳ ಎಪಿಎಂಸಿ ಪರವಾನಿಗೆದಾರರು ನಿಗದಿತ ಷರತ್ತುಗಳಿಗೆ ಒಳಪಟ್ಟು ಹರಾಜು ಪ್ರಕ್ರಿಯೆಯಲ್ಲಿಭಾಗವಹಿಸಬಹುದು.

ಹರಾಜಿನಲ್ಲಿನಿಗದಿಪಡಿಸಿರುವ ಸರಕಾರಿ ಸವಾಲು ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿಅಥವಾ ಹರಾಜಿನ ಸಮಯದಲ್ಲಿಬಿಡ್ಡುದಾರರ ಸಂಖ್ಯೆ ಕಡಿಮೆಯಿದ್ದಲ್ಲಿಹರಾಜನ್ನು ಮುಂದೂಡುವ ಅಧಿಕಾರ ತಹಸೀಲ್ದಾರರಿಗೆ ಇರುತ್ತದೆ. ಅಂತಿಮವಾಗಿ ಹರಾಜನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವೂ ತಹಸೀಲ್ದಾರರಿಗೆ ಒಳಪಟ್ಟಿರುತ್ತದೆ ಎಂದು ಕೊಪ್ಪಳ ತಹಸಿಲ್ ಕಚೇರಿ ಪ್ರಕಟಣೆ ತಿಳಿಸಿದೆ.

---

ನೇರ ಸಂದರ್ಶನ

ಕೊಪ್ಪಳ: ತಾಲೂಕಿನ ಟಣಕನಕಲ್ ನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿತಾತ್ಕಾಲಿಕ ಅತಿಥಿ ಬೋಧಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಗೆ ಆ.20ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.

ಸಂಸ್ಥೆಯ ಎಂಎಂವಿ ವಿಭಾಗದಲ್ಲಿತುರ್ತು ಅಗತ್ಯವಿರುವ ಮೋಟರ್ ವೆಹಿಕಲ್ ಮೆಕ್ಯಾನಿಕ್ ವೃತ್ತಿಗೆ ಒಬ್ಬ ಅತಿಥಿ ಬೋಧಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಮೋಟರ್ ವೆಹಿಕಲ್ ಮೆಕ್ಯಾನಿಕ್ ವೃತ್ತಿಯಲ್ಲಿಐಟಿಐ ಉತ್ತೀರ್ಣರಾಗಿ ಅಪ್ರೆಂಟಿಸ್ ಶಿಪ್ ಪೂರ್ಣಗೊಳಿಸಿರಬೇಕು. ಅಥವಾ ಡಿಪ್ಲೊಮಾ ಇನ್ ಆಟೊಮೊಬೈಲ್ ಎಂಜಿನಿಯರಿಂಗ್ ಉತ್ತೀರ್ಣರಾಗಿದ್ದು, ಕನಿಷ್ಠ ಎರಡು ವರ್ಷಗಳ ಬೋಧನಾ ಅಥವಾ ಕೈಗಾರಿಕಾ ಕ್ಷೇತ್ರದ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7483165641 ಅಥವಾ 9986707080 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.