* ಚಿತ್ರನಟ ಮುಖ್ಯಮಂತ್ರಿ ಚಂದ್ರು ಅಭಿಮತ* ಸಂವಾದ ಕಾರ್ಯಕ್ರಮ
ವಿಕ ಸುದ್ದಿಲೋಕ ಹುಣಸೂರು
ಡಾ.ಬಿ.ಆರ್ . ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ರಕ್ಷಣೆ ಯುವ ಜನರ ಕೈಯಲ್ಲಿದ್ದು, ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ರಂಗಕರ್ಮಿ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು.
ನಗರದ ಸರಕಾರಿ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮೈಸೂರಿನ ದಾರಿ ಫೌಂಡೇಷನ್ ಸಹಯೋಗದಲ್ಲಿಹಮ್ಮಿಕೊಂಡಿದ್ದ ‘ಭವಿಷ್ಯದಲ್ಲಿಪ್ರಜಾಪ್ರಭುತ್ವದ ರಕ್ಷಣೆ, ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ವಿಶ್ವದಲ್ಲೇ ವಿಶಿಷ್ಟವಾದ ಸಂವಿಧಾನದಲ್ಲಿಸಮಾನತೆ, ಭ್ರಾತೃತ್ವ, ವಿಭಿನ್ನತೆಯಲ್ಲಿಏಕತೆಯನ್ನು ಕಂಡಂತಾಗಿದ್ದು, ಹಲವಾರು ಧರ್ಮ, ಭಾಷಿಕರನ್ನು ಹೊಂದಿರುವ ದೇಶದಲ್ಲಿಸಂವಿಧಾನದ ಆಶಯದಂತೆ ಎಲ್ಲರಿಗೂ ಸೂರು, ನೀರು ಸಿಗುತ್ತಿಲ್ಲ. ಬಸವಣ್ಣನವರು ಅನುಭವ ಮಂಟಪದಲ್ಲಿಸರ್ವ ಜನರಿಗೂ ಒಳಿತು ಮಾಡುವ ಜೀವನಾಧಾರಿತ ಸಂವಿಧಾನ ರೂಪಿಸಿದ್ದರು. ಸ್ವಾತಂತ್ರ್ಯ ಭಾರತದಲ್ಲಿಅಂಬೇಡ್ಕರ್ ಸಂವಿಧಾನ ರಚಿಸಿ ಜಾತಿ, ಧರ್ಮ, ಭಾಷೆಗೆ ಅನುಗುಣವಾಗಿ ಮೀಸಲು ಜಾರಿಗೊಳಿಸಿ ಹಿಂದುಳಿದವರ ಅಭಿವೃದ್ಧಿಗೆ ಒತ್ತು ನೀಡಿದ್ದರು. ಕಾಣದ ಕೈಗಳಿಂದ ಮೀಸಲು ಸಮಪಾಲು ದಕ್ಕದೆ ಉಳ್ಳವರ ಪಾಲಾಗಿದೆ,’’ ಎಂದು ಬೇಸರಿಸಿದರು.
‘‘ನಮ್ಮದು ಹಿಂದೂ ರಾಷ್ಟ್ರವಲ್ಲ. ಸರ್ವಧರ್ಮ, ಸರ್ವಜನಾಂಗದ ಶಾಂತಿಯ ತೋಟ. ಸಂವಿಧಾನದ ಆಶಯದಂತೆ ಶಿಕ್ಷಣ, ಆರೋಗ್ಯ ಉಚಿತವಾಗಿ ಕಲ್ಪಿಸಬೇಕು. ಸರಕಾರಗಳು ಸಂವಿಧಾನದ ಆಶಯದಂತೆ ಆಡಳಿತ ನಡೆಸದೇ ಯುವಪೀಳಿಗೆಯನ್ನು ತಪ್ಪು ದಾರಿಯಲ್ಲಿತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿದ್ದು, ಅದನ್ನು ಪ್ರಶ್ನಿಸುವ ಮನಸ್ಥಿತಿಯನ್ನು ಯುವಸಮುದಾಯ ಬೆಳೆಸಿಕೊಳ್ಳಬೇಕು,’’ ಎಂದರು.
ದಾರಿ ಫೌಂಡೇಶನ್ ಕಾರ್ಯದರ್ಶಿ ತಗಡೂರು ವೀರೇಶ್ ಕುಮಾರ್ ಮಹಾಮನೆ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪುಟ್ಟರಾಜು, ಕನ್ನಡ ಪ್ರಾಧ್ಯಾಪಕ ಡಾ.ಪ್ರಸನ್ನ, ದಾರಿ ಫೌಂಡೇಷನ್ ಅಧ್ಯಕ್ಷ ಎಲ್ . ರಂಗಯ್ಯ, ಸಂಚಾಲಕ ಎಂ.ಕೆ. ಅಪ್ಪಯ್ಯ, ಪ್ರಾಂಶುಪಾಲ ರಜೀಯಾ ಸುಲ್ತಾನಾ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಬಸವಲಿಂಗಸ್ವಾಮಿ, ವಿದ್ಯಾರ್ಥಿ ಪ್ರತಿನಿಧಿ ಸುರಕ್ಷಾ ಇದ್ದರು.
13.ಹೆಚ್ .ಯು.ಎನ್ .2
ಹುಣಸೂರು ಮಹಿಳಾ ಕಾಲೇಜಿನಲ್ಲಿನಡೆದ ಕಾರ್ಯಕ್ರಮವನ್ನು ಚಿತ್ರನಟ ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ಪ್ರಾಂಶುಪಾಲ ರಜೀಯಾ ಸುಲ್ತಾನಾ ಎಲ್ .ರಂಗಯ್ಯ, ಎಂ.ಕೆ.ಅಪ್ಪಯ್ಯ ಮತ್ತಿತರರಿದ್ದರು.