ವಿಬಿ ಜಿ ರಾಮ್ ಜಿ ಸದುಪಯೋಗಕ್ಕೆ ಕರೆ

Contributed bymadhugirinews@gmail.com|Vijaya Karnataka
implementation of vb j ramji scheme for rural employment
ವಿಕ ಸುದ್ದಿಲೋಕ ತುಮಕೂರು

ಗ್ರಾಮೀಣ ಭಾಗದ ಕೂಲಿಕಾರರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸರಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ರೋಜಗಾರ ಮತ್ತು ಆಜೀವಿಕ ಮಿಷನ್ ಗ್ರಾಮೀಣ (ವಿಬಿ ಜಿ ರಾಮ್ ಜಿ) ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿದೆ ಎಂದು ತಾಪಂ ಇಒ ಲೋಕೇಶ್ ಕುಮಾರ್ ಬಿ. ಹೇಳಿದರು.
ತಾಲೂಕಿನ ಹಿರೇಹಳ್ಳಿ ಗ್ರಾಪಂ ಕೋಳಿಹಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿಆಯೋಜಿಸಿದ್ದ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಈ ಯೋಜನೆಯಡಿ ಸದ್ಯ ಪ್ರತಿ ದಿನದ ಕೂಲಿ ಮೊತ್ತವನ್ನು 382 ರೂ.ಗೆ ನಿಗದಿಪಡಿಸಲಾಗಿದ್ದು, ಅರ್ಹ ಕೂಲಿಕಾರರಿಗೆ ಒಟ್ಟು 125 ದಿನಗಳ ಉದ್ಯೋಗಾವಕಾಶ ಸಿಗಲಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಕೂಲಿಕಾರರು ವಲಸೆ ಹೋಗದೆ, ತಮ್ಮದೇ ಗ್ರಾಮದಲ್ಲಿಸಿಗುವ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಈ ಸಂದರ್ಭದಲ್ಲಿಪಿಡಿಒ ಲತಾ, ತಾಲೂಕು ಐಇಸಿ ಸಂಯೋಜಕ ಕೃಷ್ಣಪ್ಪ, ಗ್ರಾಪಂ ಕರ ವಸೂಲಿಗಾರ ಸತೀಶ್ , ಡಿಇಒ ಹಾಗೂ ಗ್ರಾಮದ ಸಾರ್ವಜನಿಕರು ಹಾಗೂ ಕೂಲಿಕಾರರು ಹಾಜರಿದ್ದರು.

ಫೋಟೋ 13ಕೆಜಿಎಚ್ 7: ಕೋಳಿಹಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿರೋಜಗಾರ ದಿನಾಚರಣೆ ನಡೆಯಿತು.