ಆಹಾರ ಸಂಸ್ಕೃತಿ

Contributed byShridevi Ambekallu|Vijaya Karnataka
complete recipe for delicious sweets made during the panchami festival
ಪಂಚಮಿ ಹಬ್ಬಕ್ಕೆ ಸಿಹಿ ಉಂಡೆ

-------------
*ವೀಣಾ ಶಂಕರ್ ಬೆಂಗಳೂರು

--

ಅಳ್ಳಿಟ್ಟಿನ ಉಂಡೆ

ಬೇಕಾಗುವ ಸಾಮಗ್ರಿ: ಬಿಳಿ ಜೋಳ ಒಂದು ಬಟ್ಟಲು, ನೀರು ಐದು ಬಟ್ಟಲು, ಬೆಲ್ಲದ ಪುಡಿ ಒಂದು ಬಟ್ಟಲು.

ವಿಧಾನ: ನೀರನ್ನು ಒಲೆಯ ಮೇಲೆ ಇಟ್ಟು ಕುದಿ ಬಂದಾಗ ಜೋಳವನ್ನು ಹಾಕಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಇಡಿ. ನಂತರ ನೀರನ್ನು ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿಒಂದು ದಿನ ಆರಲು ಬಿಡಿ. ದಪ್ಪತಳದ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕಾದ ನಂತರ ಒಂದು ಹಿಡಿ ಜೋಳವನ್ನು ಹಾಕಿ ಮೇಲೆ ಒಂದು ತೆಳುವಾದ ಬಟ್ಟೆಯನ್ನು ಮುಚ್ಚಿ (ಅರಳು ಹಾರದಂತೆ) ತಿರುಗಿಸುತ್ತಾ ಇರಿ, ಅರಳು ತಯಾರಾಗುತ್ತದೆ. ಇದೇ ರೀತಿ ಎಲ್ಲಾಅರಳನ್ನು ತಯಾರಿಸಿ ಕೊಂಡು ಸಣ್ಣಗೆ ಪುಡಿ ಮಾಡಿ ಒಂದು ಪಾತ್ರೆಯಲ್ಲಿಹಾಕಿ. ಬೆಲ್ಲವನ್ನು ಎರಡು ಚಮಚ ಬಿಸಿ ನೀರು ಹಾಕಿ ಕರಗಿಸಿ. ಅಳ್ಳಿಟ್ಟಿಗೆಹಾಕಿ ಉಂಡೆ ಮಾಡಿ.

----

ನವಣೆ ಉಂಡೆ

ಬೇಕಾಗುವ ಸಾಮಗ್ರಿ: ನವಣೆ ಹಿಟ್ಟು ಒಂದು ಬಟ್ಟಲು, ಬಾದಾಮಿ ಅರ್ಧ ಬಟ್ಟಲು, ಬೆಲ್ಲದ ಪುಡಿ ಒಂದು ಬಟ್ಟಲು, ಏಲಕ್ಕಿ,ತುಪ್ಪ ಎರಡು ಚಮಚ, ಗೋಡಂಬಿ ಚೂರುಗಳು.

ವಿಧಾನ: ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಬಾದಾಮಿ ಹಾಕಿ ಐದು ನಿಮಿಷ ಹುರಿದು ಆರಿದ ನಂತರ ಸಣ್ಣಗೆ ಪುಡಿ ಮಾಡಿ. ನಂತರ ನವಣೆ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿಪರಿಮಳ ಬರುÊವರೆಗೆ ಹುರಿದು ಬಾದಾಮಿ ಪುಡಿಯ ಜೊತೆಗೆ ಮಿಕ್ಸಿ ಜಾರ್ ನಲ್ಲಿಹಾಕಿ ಜೊತೆಗೆ ಏಲಕ್ಕಿ ಪುಡಿ ಬೆಲ್ಲಸೇರಿಸಿ ಎರಡು ನಿಮಿಷ ರುಬ್ಬಿ ತಟ್ಟೆಗೆ ಹಾಕಿ ಕೊಂಡು ತುಪ್ಪದಲ್ಲಿಹುರಿದು ಗೋಡಂಬಿ ಹಾಕಿ ತುಪ್ಪ ಸೇರಿಸಿ ಉಂಡೆಗಳನ್ನು ಕಟ್ಟಿ.

-----

ಶೇಂಗಾ, ಪುಟಾಣಿ ಉಂಡೆ

ಬೇಕಾಗುವ ಸಾಮಗ್ರಿ: ಹುರಿದ ಶೇಂಗಾ ಒಂದು ಬಟ್ಟಲು, ಪುಟಾಣಿ ಒಂದು ಬಟ್ಟಲು, ಕೊಬ್ಬರಿ ತುರಿ ಅರ್ಧ ಬಟ್ಟಲು, ಹುರಿದ ಎಳ್ಳು ಎರಡು ಚಮಚ, ಬೆಲ್ಲಒಂದು ಬಟ್ಟಲು.

ವಿಧಾನ: ತುಪ್ಪ ಒಂದು ಚಮಚ, ಪುಟಾಣಿ, ಅರ್ಧ ಬಟ್ಟಲು ಶೇಂಗಾ ಸೇರಿಸಿ ಸಣ್ಣಗೆ ಪುಡಿ ಮಾಡಿ ಅದಕ್ಕೆ ಶೇಂಗಾ ಬೀಜ, ಕೊಬ್ಬರಿ ತುರಿ, ಎಳ್ಳು ಸೇರಿಸಿ ಬೆರೆಸಿ ಇಟ್ಟುಕೊಳ್ಳಿ. ಬೆಲ್ಲಕ್ಕೆ ಎರಡು ಚಮಚ ನೀರು ಹಾಕಿ ಒಂದೆಳೆ ಪಾಕ ಬಂದ ನಂತರ ತುಪ್ಪ ಹಾಕಿ ಒಲೆ ಆರಿಸಿ ಅದಕ್ಕೆ ಹಿಟ್ಟನ್ನು ಹಾಕಿ ಚೆನ್ನಾಗಿ ಬೆರೆಸಿ ಉಂಡೆಗಳನ್ನು ಕಟ್ಟಿ.

ರವೆ ಉಂಡೆ

ಬೇಕಾಗುವ ಸಾಮಗ್ರಿ: ಸಣ್ಣ ರವೆ ಒಂದು ಬಟ್ಟಲು, ತುಪ್ಪ ಅರ್ಧ ಬಟ್ಟಲು, ಸಕ್ಕರೆ ಪುಡಿ ಅರ್ಧ ಬಟ್ಟಲು, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಕೊಬ್ಬರಿ ತುರಿ ಅರ್ಧ ಬಟ್ಟಲು, ಹಾಲು ಕಾಲು ಬಟ್ಟಲು.

ವಿಧಾನ: ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಡಿ ನಂತರ ರವೆ ಹಾಕಿ ಪರಿಮಳ ಬರುವವರೆಗೆ ಹುರಿದು ಆರಿದ ನಂತರ ಸಕ್ಕರೆ, ಕೊಬ್ಬರಿ ತುರಿ, ಏಲಕ್ಕಿ ಪುಡಿ, ಎರಡು ಚಮಚ ಹಾಲು ಸೇರಿಸಿ ಚೆನ್ನಾಗಿ ಕಲಸಿ ಉಂಡೆಗಳನ್ನು ಕಟ್ಟಿ.