ಪದವೀಧರರ ಸಮಸ್ಯೆಗೆ ಸ್ಪಂದಿಸುವೆ

Contributed bydevarajuvksira@gmail.com|Vijaya Karnataka
job and self employment support kg rangsawami
ಪದವೀಧರರ ಸಮಸ್ಯೆಗೆ ಸ್ಪಂದಿಸುವೆ

ಕೆ.ಜಿ.ರಂಗಸ್ವಾಮಿ
ಶಿರಾ: ನಿರುದ್ಯೋಗಿ ಪದವೀಧರರನ್ನು ಗುರುತಿಸಿ, ಅವರಿಗೆ ಪದವಿಗೆ ಅನುಸಾರ ಉದ್ಯೋಗ ನೀಡಲು ನಾನಾ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳನ್ನು ಸಂಪರ್ಕಿಸಿ, ಉದ್ಯೋಗವಕಾಶ ಕಲ್ಪಿಸುವುದು. ಹಾಗೂ ಅವರ ಆಸಕ್ತಿಗೆ ಅನುಗುಣವಾಗಿ ಸ್ವಯಂ ಉದ್ಯೋಗ ನಡೆಸಲು ಹಣಕಾಸು ಹಾಗೂ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಒದಗಿಸಿ ಸ್ವಯಂ ಉದ್ಯೋಗಕ್ಕೂ ಒತ್ತು ನೀಡುವುದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕೆ.ಜಿ.ರಂಗಸ್ವಾಮಿ ಹೇಳಿದರು.

ನಗರದಲ್ಲಿಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ಪದವೀಧರರನ್ನು ಭೇಟಿ ಮಾಡಿ, ಪದವೀಧರರು ನನ್ನನ್ನು ಆಯ್ಕೆ ಮಾಡಿ, ವಿಧಾನ ಪರಿಷತ್ ಗೆ ಕಳುಹಿಸಿದರೆ ಪದವೀಧರರನ್ನು ಒಗ್ಗೂಡಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುತ್ತೇನೆ. ಪದವೀಧರ ರೈತರಿಗೆ ಸರಕಾರ, ಬ್ಯಾಂಕ್ ಸಂಘ ಸಂಸ್ಥೆಗಳಿಂದ ಸಬ್ಸೀಡಿ ಕೊಡಿಸುತ್ತೇನೆ. ಅವರ ಮಕ್ಕಳಿಗೆ ಪ್ರೋತ್ಸಾಹ ಪ್ರತಿಭಾ ಪುರಸ್ಕಾರ ಮಾಡಿ, ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಮಾಡುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತಿಚ ತರಬೇತಿ ಸೇರಿದಂತೆ ಎಲ್ಲಾಸಮಸ್ಯೆಗಳಿಗೂ ಸ್ಪಂದಿಸುತ್ತೇನೆ ಎಂದರು.

15ಶಿರಾ3: ಶಿರಾ ನಗರದಲ್ಲಿಆಗ್ನೇಯ ಪದವೀಧರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕೆ.ಜಿ.ರಂಗಸ್ವಾಮಿ ಪದವೀಧರರನ್ನು ಭೇಟಿ ಮಾಡಿ ಮತಯಾಚಿಸಿದರು.