ಮಾನ್ವಿ: ‘‘ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು,’’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣದ ರಾಜ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಗೂಳಿ ಒತ್ತಾಯಿಸಿದರು. ಪಟ್ಟಣದ ತಹಸಿಲ್ ಕಚೇರಿಯಲ್ಲಿಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣದಿಂದ ಗ್ರೇಡ್ -2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ‘‘ಸಂತ್ರಸ್ತೆಯ ಕುಟುಂಬಕ್ಕೆ ಸರಕಾರದ ನಿಯಮದಂತೆ ಸೂಕ್ತ ಪರಿಹಾರ, ಭದ್ರತೆ ಮತ್ತು ಉಚಿತ ಕಾನೂನು ನೆರವು ಒದಗಿಸಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿಮಹಿಳೆಯರು ಮತ್ತು ಯುವತಿಯರ ಸುರಕ್ಷತೆಗೆ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ರಂಗರಾವ್ ಕುಲಕರ್ಣಿ, ರಾಮಣ್ಣ ನಾಯಕ, ಜಿಲ್ಲಾಪ್ರಧಾನ ಕಾರ್ಯದರ್ಶಿ ಅಮರೇಶ ಪಾಟೀಲ್ ಹರನಹಳ್ಳಿ, ಉಪಾಧ್ಯಕ್ಷ ಇರ್ಫನ್ ಧಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪವಾರ್ , ಉಸ್ಮಾನ್ ಪಾಷಾ, ಗಿರೀಶ್ ಜೋಷಿ, ರಾಯಚೂರು ಗ್ರಾಮೀಣ ಅಧ್ಯಕ್ಷ ಯಲ್ಲಪ್ಪ ನಾಯಕ, ದೀಪಕ್ ಪಾಟೀಲ್ , ಕೃಷ್ಣ ದಾನಿ, ರಾಮು ಭಂಡಾರಿ, ರಾಘವೇಂದ್ರ ನಾಯಕ, ದೇವರೆಡ್ಡಿ ಇದ್ದರು.---
21ಮಾನ್ವಿ8:
ಮಾನ್ವಿ ತಹಸೀಲ್ದಾರ್ ಕಚೇರಿ ಅಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.