ಇಂದು ಕಾಮಗಾರಿಗೆ ಶಾಸಕರಿಂದ ಚಾಲನೆ | 16 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ
ಚಾಲುಕ್ಯರ ಬೀಡಲ್ಲಿಹೊಸ ಬಸ್ ನಿಲ್ದಾಣಲಿಂಗರಾಜ ಚಿನಿವಾಲರ ಬಾದಾಮಿ
ಪ್ರವಾಸಿಗರ ನೆಚ್ಚಿನ ತಾಣ, ಚಾಲುಕ್ಯರ ಬೀಡು ಬಾದಾಮಿಯಲ್ಲಿನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿದೆ. ಅಂದಾಜು 16 ಕೋಟಿ ರೂ. ವೆಚ್ಚದಲ್ಲಿನಿಲ್ದಾಣ ನಿರ್ಮಾಣಕ್ಕೆ ಆ. 22 ರಂದು ಚಾಲನೆ ದೊರೆಯಲಿದೆ.
ಸದ್ಯ ಇರುವ ನಿಲ್ದಾಣದ ಕಟ್ಟಡವನ್ನೇ ತೆರವುಗೊಳಿಸಿ ಹೈಟೆಕ್ ಆಗಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಆರಂಭಿಕ ಹಂತದಲ್ಲಿ997 ಲಕ್ಷ ರೂ. ಕಾಮಗಾರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಲಿದ್ದಾರೆ.
ಕಾಮಗಾರಿ ಆರಂಭ ಆಗುವವರೆಗೆ ಇದೇ ನಿಲ್ದಾಣದಿಂದ ಬಸ್ ಕಾರ್ಯಾಚರಣೆ ನಡೆಯಲಿದೆ. ಬಳಿಕ ನಿಲ್ದಾಣ ಎದುರಿನ ತಾಲೂಕು ಪಂಚಾಯಿತಿ ವಸತಿ ನಿಲಯಗಳ ಜಾಗದಲ್ಲಿತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಶುರುವಾಗಲಿದೆ.
ಪ್ರವಾಸಿ ತಾಣ ಬಾದಾಮಿಗೆ ದೇಶ, ವಿದೇಶದ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿಮತ್ತಷ್ಟು ಹೈಟೆಕ್ ಗೊಳಿಸಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ಉದ್ದೇಶದಿಂದ ನೂತನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಭವಿಷ್ಯದ 3 ದಶಕಗಳ ದೃಷ್ಟಿಯಲ್ಲಿಟ್ಟುಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಏನಿರಲಿವೆ?
ನೆಲಮಹಡಿ:
ಹೈಟೆಕ್ ಬಸ್ ನಿಲ್ದಾಣದ ನೆಲಮಹಡಿಯಲ್ಲಿಉಪಾಹಾರ ಗೃಹ, ಮಹಿಳೆಯರ ವಿಶ್ರಾಂತಿ ಕೋಣೆ, ಟಿಕೆಟ್ ಕೌಂಟರ್ ಮತ್ತು ಕ್ಯಾಶಿಯರ್ ಕೊಠಡಿ, ಸಂಚಾರ ನಿಯಂತ್ರಕರ ಕಚೇರಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಎಟಿಎಂ, ವಾಣಿಜ್ಯ ಮಳಿಗೆಗಳು, ಆಡಳಿತ ಕಚೇರಿ, ಬಸ್ , ಕಾರ್ , ಬೈಕ್ ಮತ್ತು ಆಟೊ ನಿಲುಗಡೆ ಸ್ಥಳ ನಿಗದಿ ಮಾಡಲಾಗಿದೆ.
ಮೊದಲ ಮಹಡಿ:
ಕಡತ ನಿರ್ವಹಣೆ ಕೊಠಡಿ, ಸಿಬ್ಬಂದಿ ವಿಶ್ರಾಂತಿ ಕೊಠಡಿ, ಸಿಬ್ಬಂದಿ ಸಭಾಭವನ, ತುರ್ತು ಉಪಕರಣಗಳು, ಶೌಚಾಲಯ, ಮುಖ್ಯ ಸಂಚಾರ ನಿಯಂತ್ರಕರ ಕೊಠಡಿ, ವ್ಯವಸ್ಥಾಪಕರ ಕಚೇರಿ, ಪೊಲೀಸ್ ಔಟ್ ಪೊಸ್ಟ್ , ಸಂಗ್ರಹಣಾ ಕೊಠಡಿ, ಉದ್ಯೋಗಿಗಳ ಲಾಕರ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
------
ಬಾದಾಮಿ ಪ್ರವಾಸಿ ತಾಣವಾಗಿರುವುದರಿಂದ ಹೈಟೆಕ್ ಆಗಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 16 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ997 ಲಕ್ಷ ರೂ. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ.