ಜಾಲತಾಣದಲ್ಲಿಅವಹೇಳನಕಾರಿ ಪೋಸ್ಟ್ ; ಆರೋಪಿಗಳ ಬಂಧನಕ್ಕೆ ಮನವಿ

Contributed bymallugoudra461987@gmali.com|Vijaya Karnataka
objectionable posts on social media against kannada organizations plea for arrests
ವಿಕ ಸುದ್ದಿಲೋಕ ಬೆಳಗಾವಿ

ಕನ್ನಡ ಸಂಘಟನೆಗಳನ್ನು ಅವಮಾನಿಸುವ ಹಾಗೂ ಕನ್ನಡ ಮುಖಂಡರನ್ನು ಹೀಯಾಳಿಸುವ ಎಐ ನಿರ್ಮಿತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿಇಂಥ ಪೋಸ್ಟ್ ಗಳನ್ನು ಹರಿಬಿಡದಂತೆ ಹಲವಾರು ಬಾರಿ ಪೊಲೀಸರು ಎಚ್ಚರಿಕೆ ನೀಡಿದಾಗಲೂ ಎಐ ಚಿತ್ರಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿಹರಿಬಿಡಲಾಗುತ್ತಿದೆ. ಈ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಕೊಳ್ಳಬೇಕೆಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಕನ್ನಡಪರ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತರು, ಈ ಬಗ್ಗೆ ತಕ್ಷಣ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕೋಲಾ, ಕನ್ನಡ ಹೋರಾಟಗಾರ ಸಯ್ಯದ್ ಮನ್ಸೂರ್ ಇತರರಿದ್ದರು.

ಫೋಟೊ: 21ಮಲ್ಲು13

ಕನ್ನಡಪರ ಸಂಘಟನೆಗಳ ಮುಖಂಡರು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರಿಗೆ ಮನವಿ ಸಲ್ಲಿಸಿದರು.