ಎಲ್ಲೆಂದರಲ್ಲಿಅನೈತಿಕ ಚಟುವಟಿಕೆ

Contributed byumeshganachari@yahoo.in|Vijaya Karnataka
immoral activities on the streets encroaching sacred places
ಮಠ, ದೇವಸ್ಥಾನ, ಗದ್ದುಗೆ, ಶಾಲೆ ಸುತ್ತಲಿನ ಪ್ರದೇಶವೂ ಕುಡುಕರ ತಾಣ

ಎಲ್ಲೆಂದರಲ್ಲಿಅನೈತಿಕ ಚಟುವಟಿಕೆ
ವಿಕ ಸುದ್ದಿಲೋಕ ಇಳಕಲ್

ನಗರ ಹೊರವಲಯದ ವಿಜಯ ಮಹಾಂತೇಶ ಕರ್ತೃ ಗದ್ದುಗೆ ಸೇರಿದಂತೆ ಮಠ, ದೇವಸ್ಥಾನ ಹಾಗೂ ಶಾಲಾ, ಕಾಲೇಜ್ ಗಳ ಅಕ್ಕಪಕ್ಕಗಳ ಸ್ಥಳಗಳೂ ಕುಡುಕರ ತಾಣವಾಗಿ ಮಾರ್ಪಡುತ್ತಿವೆ. ಪವಿತ್ರ ಸ್ಥಳಗಳ ಸುತ್ತಮುತ್ತ ಇಂತಹ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಆಗುತ್ತಿಲ್ಲ. ಹೀಗಾಗಿ ಪವಿತ್ರ ಸ್ಥಳಗಳೂ ಚಟಗಾರರ ಅಡ್ಡೆಗಳಾಗುತ್ತಿವೆ ಎಂದು ಪ್ರಜ್ಞಾವಂತರು ದೂರಿದ್ದಾರೆ.

ವಿಜಯ ಮಹಾಂತೇಶ ಕರ್ತೃ ಗದ್ದುಗೆಯ ಸುತ್ತಲಿನ ಪರಿಸರದಲ್ಲಿರಾತ್ರಿ ವೇಳೆ ಕುಡುಕರು ಮದ್ಯ ಸೇವಿಸಿ ಬಾಟಲಿ, ಪಾಕೆಟ್ ಎಲ್ಲೆಂದರಲ್ಲಿಎಸೆದು ಹೋಗುತ್ತಿದ್ದಾರೆ. ಜತೆಗೆ ಸಿಗರೇಟ್ ತುಂಡು, ಖಾಲಿ ಗುಟಕಾ ಚೀಟಿಗಳೂ ಬಿದ್ದಿರುತ್ತವೆ.

ದುಶ್ಟಟ ಮಾಡುವವರಿಗೆ ಮಠ, ಮಂದಿರ ಮತ್ತು ಶಾಲೆಗಳ ಸುತ್ತಲಿನ ಪರಿಸರವೂ ಲೆಕ್ಕಕ್ಕೆ ಬಾರದಂತಾಗಿದ್ದು, ನೈತಿಕತೆಯ ಅಧಃಪತನ ಪ್ರದರ್ಶನವಾಗುತ್ತಿದೆ. ಹಲವರು ರಾತ್ರಿ ವೇಳೆ ತಮ್ಮ ಚಟ ತೀರಿಸಿಕೊಂಡು ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿಬಿಸಾಕಿ ಹೋಗುತ್ತಿದ್ದಾರೆ. ಬೆಳಗ್ಗೆ ಮಠ, ದೇವಸ್ಥಾನಕ್ಕೆ ಬರುವವರು ಹಾದಿ ಬೀದಿಯಲ್ಲಿಇಂತಹ ದೃಶ್ಯಗಳನ್ನು ಕಂಡು ರೋಷಿ ಹೋಗಿದ್ದಾರೆ.

ನಗರ ವಿಶಾಲವಾಗಿ ಬೆಳೆಯುತ್ತಿದ್ದರೂ ಪೊಲೀಸ್ ಠಾಣೆಯಲ್ಲಿಸಿಬ್ಬಂದಿ ಸಂಖ್ಯೆ ಹೆಚ್ಚಳ ಆಗುತ್ತಿಲ್ಲ. ಕಡಿಮೆ ಸಿಬ್ಬಂದಿ ಇರುವುದರಿಂದ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲಎಂಬ ಅಸಹಾಯಕತೆ ಇಲಾಖೆಯ ಅಧಿಕಾರಿಗಳಿಂದಲೂ ವ್ಯಕ್ತವಾಗುತ್ತಿದೆ. ಹೀಗಾಗಿ ಕೆಲವರು ಧೈರ್ಯ ಮಾಡಿ ಠಾಣೆಗೆ ಮಾಹಿತಿ ನೀಡಿದರೂ ನಗರ ಮತ್ತು ಹೊರ ವಲಯದಲ್ಲಿಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ.

(ಫೋಟೊ:20-ಐಎಲ್ಕೆ-2)-

ಇಳಕಲ್ ವಿಜಯ ಮಹಾಂತೇಶ ಕರ್ತೃ ಗದ್ದುಗೆಯ ತೇರಿನ ಮನೆಯ ಹಿಂದಿನ ಜಾಗದಲ್ಲಿಮದ್ಯದ ಬಾಟಲಿ, ಪಾಕೆಟ್ , ಗುಟಕಾ ಚೀಟಿ.