ಎನ್ -ಜೆನ್ ಅಂಚೆ ಕಚೇರಿ ಉದ್ಘಾಟನೆ

Contributed bymaheshbadiger05@gmail.com|Vijaya Karnataka
inauguration of n jen post office in dharwad
22ಮಹೇಶ3

ಎನ್ -ಜೆನ್ ಅಂಚೆ ಕಚೇರಿ ಉದ್ಘಾಟನೆ
ವಿಕ ಸುದ್ದಿಲೋಕ ಧಾರವಾಡ

ಒಂದು ಕಾಲದಲ್ಲಿಪೋಸ್ಟ್ ಆಫೀಸ್ ಮತ್ತು ರೈಲು ಎರಡೂ ಜನರ ಜೀವನಾಡಿಯಾಗಿ ಕೆಲಸ ಮಾಡಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ವಿದ್ಯಾಗಿರಿ ಜೆಎಸ್ ಎಸ್ ಕಾಲೇಜಿನ ಆವರಣದಲ್ಲಿಶನಿವಾರ ನಡೆದ ನವೀಕೃತ ಅತ್ಯಾಧುನಿಕ ಎನ್ -ಜೆನ್ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಪೋಸ್ಟ್ ಆಫೀಸ್ ನ್ನು ಪ್ರಾಮಾಣಿಕ ಡಿಪಾರ್ಟಮೆಂಟ್ ಎಂದೂ ಕರೆಯಲಾಗುತ್ತದೆ. ದೇಶದ ಮಣ್ಣಿನಲ್ಲಿಸಂಸ್ಕಾರ ಮತ್ತು ಪ್ರಾಮಾಣಿಕತೆ ಇತ್ತು. ಅದು ಯಥಾವತ್ತಾಗಿ ಪೋಸ್ಟ್ ಆಫೀಸ್ ನಲ್ಲಿಕಾಣುತ್ತದೆ ಎಂದು ತಿಳಿಸಿದರು.

ಅಂಚೆ ಇಲಾಖೆಯು ಕಾಲಕ್ಕೆ ತಕ್ಕಂತೆ ಆಧುನಿಕ ಸೌಲಭ್ಯಗಳು , ಸುಧಾರಿತ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿಮುನ್ನಡೆಯುತ್ತಿದೆ. ದೇಶಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ಎನ್ -ಜೆನ್ ಅಂಚೆ ಕಚೇರಿಗಳನ್ನು ಆರಂಭಿಸಲಾಗಿದ್ದು, ಧಾರವಾಡದ ವಿದ್ಯಾಗಿರಿ ಕಚೇರಿಯೂ ಈ ರಾಷ್ಟ್ರವ್ಯಾಪಿ ವಿಸ್ತರಣೆಯ ಭಾಗವಾಗಿರುವುದು ಹೆಮ್ಮೆಯ ವಿಷಯ ಎಂದರು.

ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಆವರಣಗಳಲ್ಲಿಯುವ ಪೀಳಿಗೆಗೆ ಅನುಕೂಲವಾಗುವಂತೆ ಎನ್ -ಜೆನ್ ಅಂಚೆ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಆಧುನಿಕ ಹಾಗೂ ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಸಾರ್ವಜನಿಕರಿಗೆ ವೇಗವಾಗಿ ಮತ್ತು ಸುಲಭವಾಗಿ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಅನುಗುಣವಾಗಿ ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳ ಮೂಲಕ ಅಂಚೆ ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದರು.

ಧಾರವಾಡ ಎನ್ .ಕೆ. ವಿಭಾಗದ ಪೋಸ್ಟಲ್ ಸರ್ವಿಸ್ ನಿರ್ದೇಶಕ ಶ್ರೀಹರ್ಷ ಎನ್ ., ಜೆಎಸ್ ಎಸ್ ಕಾರ್ಯದರ್ಶಿ ಡಾ.ಅಜಿತ್ ಪ್ರಸಾದ, ಬೆಳಗಾವಿಯ ಎಸ್ ಎಸ್ ಪಿಒ ಆರುಷಿ ಶರ್ಮಾ, ಧಾರವಾಡದ ಡೆಪ್ಯುಟಿ ಎಸ್ ಒ ಪ್ರವೀಣ್ ಎಫ್ .ಎ. ಸೇರಿದಂತೆ ಅಂಚೆ ಅಧೀಕ್ಷಕರು, ವಿದ್ಯಾರ್ಥಿಗಳು ಇತರರು ಇದ್ದರು.

ಫೋಟೊ: 22ಮಹೇಶ3

ಧಾರವಾಡ ವಿದ್ಯಾಗಿರಿ ಜೆಎಸ್ ಎಸ್ ಕಾಲೇಜಿನ ಆವರಣದಲ್ಲಿಶನಿವಾರ ನಡೆದ ನವೀಕೃತ ಅತ್ಯಾಧುನಿಕ ಎನ್ -ಜೆನ್ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.