ಲಕ್ಕುಂಡಿ

Contributed bykumbarvc75@gmail.com|Vijaya Karnataka
lake development a significant step in the direction of dharmasthala rural development project
21ಎಲ್ ಕೆಡಿ2

ಬಾಗಿನ ಅರ್ಪಣೆ, ನಾಮಫಲಕ ಅನಾವರಣ, ಕೆರೆ ಹಸ್ತಾಂತರ (ಕಿಕ್ಕರ್ )
ಗ್ರಾಮಗಳಿಗೆ ಕೆರೆಗಳು ವರದಾನ (ಹೆಡ್ )

ವಿಕ ಸುದ್ದಿಲೋಕ ಲಕ್ಕುಂಡಿ

ಹಿಂದಿನ ಕಾಲದಲ್ಲಿಗ್ರಾಮಕ್ಕೊಂದು ಕೆರೆಗಳನ್ನು ಹಿರಿಯರು ನಿರ್ಮಾಣ ಮಾಡಿ ಗ್ರಾಮದ ಜಲ ರಕ್ಷಣೆ ಮಾಡುತ್ತಿದ್ದರು. ಈ ದಿಸೆಯಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯು ನಮ್ಮೂರು ನಮ್ಮ ಕೆರೆ ಯೋಜನೆ ಮೂಲಕ ಕುಡಿಯುವ ಕೆರೆಗಳ ಪುನಶ್ಚೇತನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮಿಗಳು ಹೇಳಿದರು.

ಇಲ್ಲಿಯ ಸಮೀಪದ ತಿಮ್ಮಾಪೂರದಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ , ಶುದ್ಧಗಂಗಾ, ಕೆರೆ ಅಭಿವೃದ್ಧಿ ಸಮಿತಿ ತಿಮ್ಮಾಪೂರ ಇವರ ಸಹ ಭಾಗಿತ್ವದದಲ್ಲಿನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿಕೆರೆಗೆ ಬಾಗಿನ ಅರ್ಪಣೆ, ನಾಮಫಲಕ ಅನಾವರಣ, ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ತಿಮ್ಮಾಪೂರ ಗ್ರಾಮದಲ್ಲಿಬೇಸಿಗೆ ಸಮಯದಲ್ಲಿಕುಡಿಯುವ ನೀರಿನ ಅಭಾವವಾಗುತ್ತದೆ. ಈ ಗ್ರಾಮಕ್ಕೆ ವರದಾನವಾಗಿರುವ ಕೆರೆಯನ್ನು ಧರ್ಮಸ್ಥಳ ಸಂಸ್ಥೆಯು ಜವಾಬ್ದಾರಿ ತೆಗೆದುಕೊಂಡ ಅಭಿವೃದ್ಧಿ ಮಾಡಿದ ಕಾರ್ಯ ಶ್ಲಾಘನೀಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಇಲ್ಲಿಯವರೆಗೆ 995 ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಜಲಸಂರಕ್ಷಣೆಯಲ್ಲಿಮಾದರಿಯಾಗಿದೆ. ತಿಮ್ಮಾಪುರ ಗ್ರಾಮದ 9 ಎಕರೆ ವಿಸ್ತೀರ್ಣದ ಕುಡಿಯುವ ನೀರಿನ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ರೈತ ಸಂಘದ ಜಿಲ್ಲಾಅಧ್ಯಕ್ಷ ಯಲ್ಲಪ್ಪ ಬಾಬರಿ ಮಾತನಾಡಿದರು. ರಾಮನಗೌಡ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾನಿರ್ದೇಶಕ ಕೇಶವ ದೇವಾಂಗ, ಪಿಡಿಒ ಶಿವಲೀಲಾ ಗೂಳಪ್ಪನವರ,ಆನಂದ ಕಮ್ಮಾರ, ಮಲ್ಲಪ್ಪ ಅಂಗಡಿ, ಬಾಳಪ್ಪ ಗಂಗರಾತ್ರಿ, ಬಸಪ್ಪ ಗಾಂದಿ, ಬಸವರಾಜ ಯಲಬುರ್ಗಿ, ಮಲ್ಲಪ್ಪ ಡಂಬಳ, ಶರಣಪ್ಪ ಜೋಗಿನ, ಮಹಾದೇವಪ್ಪ ಇದ್ಲಿ, ಅಖಿಲ ಕರ್ನಾಟಕ ಜಿಲ್ಲಾಜನ ಜಾಗೃತಿ ವೇದಿಕೆ ಸದಸ್ಯ ಗವಿಸಿದ್ದಯ್ಯ ಹಳ್ಳಿಕೇರಿಮಠ ಉಪಸ್ಥಿತರಿದ್ದರು. ವಿಶಾಲ ಮಲ್ಲಾಪೂರ ಸ್ವಾಗತಿಸಿದರು. ಮಂಜುಳಾ ಜೈನ್ ನಿರೂಪಿಸಿದರು. ಸಿದ್ಧಾರೂಢಸ್ವಾಮಿ ವಂದಿಸಿದರು.

21ಎಲ್ ಕೆಡಿ2

ತಿಮ್ಮಾಪೂರದಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನಗೊಂಡ ಕುಡಿಯುವ ನೀರಿನ ಕೆರೆಗೆ ಬಾಗಿನ ಅರ್ಪಿಸಲಾಯಿತು.

21ಎಲ್ ಕೆಡಿ2ಎ

ತಿಮ್ಮಾಪೂರದಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನಗೊಂಡ ಕುಡಿಯುವ ನೀರಿನ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.