ಶಿವಯೋಗಿಗಳ ಕಾರ್ಯ ಗಣನೀಯ

Contributed byravimgl.kumar13@gmail.com|Vijaya Karnataka
importance of shivayogis work and aunatya mother
ಶಿವಯೋಗಿಗಳ ಕಾರ್ಯ ಗಣನೀಯ

ವಿಕ ಸುದ್ದಿಲೋಕ ಚಿತ್ರದುರ್ಗ
ನಾಡಿನ ಆಧ್ಯಾತ್ಮಿಕ ಪುರುಷರಲ್ಲಿಶಿವಯೋಗಿಗಳ ಪರಂಪರೆ ಅತಿಹೆಚ್ಚು ಕೆಲಸ ಮಾಡಿದೆ. ಅವರಲ್ಲಿಮುರುಗೋಡ ಮಹಾಂತ ಶಿವಯೋಗಿಗಳ ಪಾತ್ರ ಗಣನೀಯ, ಅವರು ಶಿವಯೋಗದ ಬಲದಿಂದ ಔನತ್ಯಕ್ಕೇರಿದರು ಎಂದು ಶ್ರೀ ಬಸವ ಮುರುNೕಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಬಸವ ಮಂಟಪದಲ್ಲಿಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ 10ನೇ ದಿನದ ಕಾರ್ಯಕ್ರಮದ ಅಂಗವಾಗಿ ಎಸ್ಸೆನ್ ಸ್ಮಾರಕ ಟ್ರಸ್ಟ್ ನಿರ್ದೇಶಕ ಎಸ್ .ಷಣ್ಮುಖಪ್ಪ ದಂಪತಿ ಆಯೋಜಿಸಿದ್ದ ಗೋಷ್ಠಿಯ ಸಮ್ಮುಖ ವಹಿಸಿ ಮಾತನಾಡಿದರು.

ಬಸವ ಮಂಟಪ ಉಸ್ತುವಾರಿ ಮಾತೆ ದಾನೇಶ್ವರಿ ತಾಯಿ ಮಾತನಾಡಿ, ನಾಡಿಗೆ 12ನೇ ಶತಮಾನದ ಬಸವಾದಿ ಶಿವಶರಣರ ಕೊಡುಗೆ ಅಪಾರ. ಅದರಂತೆ ಬಸವಧರ್ಮ ಪೀಠದ ಜವಾಬ್ದಾರಿ ಹೊತ್ತ ಲಿಂಗಾನಂದ ಶ್ರೀಗಳು ಹಾಗೂ ಮಾತೆ ಮಹಾದೇವಿ ಇಬ್ಬರೂ ಬಸವ ಕಣ್ಮಣಿಗಳು. ಬಸವಣ್ಣನವರಲ್ಲಿಅಕ್ಕಮಹಾದೇವಿ ತಾಯಿ ಸುಮಾರು 52 ವಿಶೇಷ ಗುಣಗಳನ್ನು ಗುರುತಿಸಿದ್ದರು ಎಂದರು.

ಮುರುಗೋಡ ಮಹಾಂತ ಶಿವಯೋಗಿಗಳ ಜೀವನ ಹಾಗೂ ಸಾಧನೆ ಕುರಿತು ಎಸ್ ಜೆಎಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಎಲ್ .ಆರ್ .ರವಿಕಲಾ ಮಾತನಾಡಿದರು.

ಆಯೋಜಕರಾದ ಅನ್ನಪೂರ್ಣಮ್ಮ ಷಣ್ಮುಖಪ್ಪ, ಗುರುಬಸವರಾಜ, ಬಸವದಳದ ಪ್ರಮುಖರಾದ ವೀರೇಶ್ , ಶಂಕ್ರಪ್ಪ, ಬಸವ ಹಾಗೂ ಇತರೆ ಸಮಾಜ ಸಂಘಟನೆಗಳ ಪ್ರಮುಖರಾದ ಬಸವರಾಜಕಟ್ಟಿ, ಜಿ.ಟಿ.ನಂದೀಶ್ , ಡಾ.ಗೌರಮ್ಮ, ಕೆ.ಎಂ.ವೀರೇಶ್ , ಟಿ.ಪಿ.ಜ್ಞಾನಮೂರ್ತಿ, ಬಸವರಾಜಯ್ಯ, ಗಾಯತ್ರಿ ಶಿವರಾಂ, ಇ.ಕೆ.ಮಲ್ಲಿಕಾರ್ಜುನ, ಎಸ್ .ವಿ.ಕೊಟ್ರೇಶ್ , ಜೆ.ಎಸ್ .ಮುರುNೕಶ್ , ಸುಧಾ ತುಪ್ಪದ, ಮುಖ್ಯಶಿಕ್ಷಕಿ ಗಾಯತ್ರಿ, ಪಿ.ವೀರೇಂದ್ರಕುಮಾರ್ , ಚಂದ್ರಪ್ಪ, ಶಿಕ್ಷಕಿ ಗೀತಾ ರುದ್ರೇಶ್ , ಶೈಲಜಾ ಉಮಾಮಹೇಶ್ವರ ಇತರರಿದ್ದರು.

--

ಫೋಟೊ ಕ್ಯಾಪ್ಷನ್ /23ಸಿಟಿಡಿ34

ಚಿತ್ರದುರ್ಗದ ಬಸವ ಮಂಟಪದಲ್ಲಿಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ 10ನೇ ದಿನದ ಕಾರ್ಯಕ್ರಮದಲ್ಲಿಬಸವಣ್ಣರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.