ಮಹೇಶ ಅಡಾಳಿ, ವಿಜಯಪುರ ಞahಛಿsh.ada್ಝಜಿಃಜಞaಜ್ಝಿ.್ಚಟಞ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಸರಕಾರದಿಂದ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಯಾವಾಗ? ಎಂಬ ಚರ್ಚೆ ಶುರುವಾಗಿದೆ. ಜಲಾಶಯಕ್ಕೆ ಜುಲೈ 6ರಿಂದ ಒಳಹರಿವು ಆರಂಭಗೊಂಡಿದ್ದು, ನಂತರದ ದಿನಗಳಲ್ಲಿಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿಸುರಿದ ಮಳೆಯಿಂದಾಗಿ ಒಳಹರಿವಿನಲ್ಲಿಭಾರಿ ಏರಿಳಿತ ಕಂಡುಬಂದಿದೆ. ಲಕ್ಷಾಂತರ ಕ್ಯುಸೆಕ್ ಗಳಷ್ಟು ನೀರು ಹರಿದುಬಂದ ಪರಿಣಾಮ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಅತಿಯಾದ ಹೊರಹರಿವಿನಿಂದಾಗಿ ಆಲಮಟ್ಟಿ ಜಲಾಶಯದ ಕೆಳಭಾಗ, ನಾರಾಯಣಪುರ ಜಲಾಶಯದ ಹಿನ್ನೀರಿನ ಪ್ರದೇಶ ಹಾಗೂ ತೀರದ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಅಷ್ಟೇ ಅಲ್ಲತೀರದ ಗ್ರಾಮಗಳಲ್ಲಿಯೂ ಪ್ರವಾಹದ ಭೀತಿ ಮೂಡಿಸಿತ್ತು. ಮಹಾರಾಷ್ಟ್ರದಲ್ಲಿಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಲಾಶಯಕ್ಕೆ ಬರುತ್ತಿದ್ದ ನೀರಿನ ಪ್ರಮಾಣವೂ ಇಳಿಮುಖವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊರಬಿಡುತ್ತಿದ್ದ ನೀರನ್ನು ಹಂತ ಹಂತವಾಗಿ ಕಡಿಮೆ ಮಾಡಿ ಸಂಗ್ರಹಿಸಲಾಗುತ್ತಿದೆ. 121 ಟಿಎಂಸಿಗೂ ಅಧಿಕ: ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಇದ್ದು, ಸದ್ಯ 121.093 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ 29,388 ಕ್ಯುಸೆಕ್ ಒಳಹರಿವು ಬರುತ್ತಿದ್ದು, ಕೆಪಿಸಿಎಲ್ ಮೂಲಕ 20,000 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಸದ್ಯ ನದಿಗೆ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಿದರೆ ಗರಿಷ್ಠ ಮಟ್ಟ ತಲುಪಲಿದೆ. ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿಸರಕಾರ ಈ ಬಾರಿ ಬೇಗ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಜೀವಕಳೆ: ಮುಂಗಾರಿನಲ್ಲಿಈ ಭಾಗದಲ್ಲಿಹೆಚ್ಚಿನ ಮಳೆಯಾಗದಿದ್ದರೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿಸುರಿದ ಮಳೆಯಿಂದಾಗಿ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿ ಹರಿದು ಆಲಮಟ್ಟಿ ಜಲಾಶಯಕ್ಕೆ ನೀರು ಹರಿದುಬಂದಿದೆ. ಇದರ ಪರಿಣಾಮ ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಏರಿಕೆ ಕಾಣುತ್ತಿದೆ. ಸದ್ಯ ಡ್ಯಾಂನಲ್ಲಿಜಲಕಳೆ ಎದ್ದು ಕಾಣುತ್ತಿದೆ. ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೂ ನೀರು ಹರಿಯುತ್ತಿರುವುದರಿಂದ ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ಬಂದಿದೆ.