ಸ್ಟೈಲ್

Contributed byshubha.hegde@timesgroup.com|Vijaya Karnataka
investigation tara sutarias vintage style photoshoot
ಗ್ಲಾಮರ್ ಲುಕ್ ನಲ್ಲಿತಾರಾ

ಚಿತ್ರರಂಗದಲ್ಲಿತಮ್ಮ ವಿಭಿನ್ನ ಫ್ಯಾಷನ್ ಸೆನ್ಸ್ ನಿಂದ ಸದಾ ಸುದ್ದಿಯಲ್ಲಿರುವ ನಟಿ ತಾರಾ ಸುತಾರಿಯಾ ಇತ್ತೀಚಿನ ಫೋಟೋಶೂಟ್ ನಲ್ಲಿವಿಂಟೇಜ್ ಶೈಲಿಯ ಕಪ್ಪು ಬಣ್ಣದ ಲೇಸ್ ಗೌನ್ ಧರಿಸಿ ಗಮನ ಸೆಳೆದಿದ್ದಾರೆ. 1950ರ ದಶಕದ ಸೌಂದರ್ಯವನ್ನು ಮರುಸೃಷ್ಟಿಸಿರುವ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಾರಾ ಧರಿಸಿರುವ ಲೇಸ್ ಗೌನ್ ಹೂವಿನ ಡಿಸೈನ್ ಹೊಂದಿದೆ. ಈ ವಿಂಟೇಜ್ ಶೈಲಿಗೆ ಮತ್ತಷ್ಟು ಮೆರುಗು ನೀಡಲು ಅವರು ಕೈಗೆ ಉದ್ದನೆಯ ಕಪ್ಪು ಬಣ್ಣದ ಗ್ಲೌಸ್ ಧರಿಸಿದ್ದಾರೆ. ಕಪ್ಪು ಉಡುಪಿಗೆ ಸೂಕ್ತ ಕಾಂಟ್ರಾಸ್ವ್ ನೀಡಲು ಮುತ್ತಿನ ಚೋಕರ್ ನೆಕ್ಲೇಸ್ ಹಾಗೂ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾರಾ ತಮ್ಮ ಮೇಕಪ್ ಅನ್ನು ಸರಳ ಹಾಗೂ ನೈಸರ್ಗಿಕವಾಗಿ ಇರಿಸಿಕೊಂಡಿದ್ದಾರೆ. ಕೂದಲನ್ನು ನೀಟಾಗಿ ಹಿಂದಕ್ಕೆ ಕಟ್ಟಿ, ಮುಖದ ಅಂಚಿನಲ್ಲಿಕೆಲವು ಎಳೆಗಳನ್ನು ಬಿಟ್ಟು ಬನ್ ಶೈಲಿಯಲ್ಲಿವಿನ್ಯಾಸಗೊಳಿಸಲಾಗಿದೆ.