Indias Space Economy South Africas Aim To Attract Thousands Of Tourists By 2026
ಡೈಜೆಸ್ಟ್
Contributed by: Panchami M S|Vijaya Karnataka•
ಬಾಹ್ಯಾಕಾಶ ಆರ್ಥಿಕತೆ
ಭಾರತದ ಬಾಹ್ಯಾಕಾಶ ಆರ್ಥಿಕತೆಯು ಪ್ರಸ್ತುತ 9 ಶತಕೋಟಿ ಡಾಲರ್ ಗಳಷ್ಟಿದ್ದು, ಮುಂದಿನ ದಶಕದಲ್ಲಿ40-45 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಬಿಡುಗಡೆಯಾದ ಮಾಹಿತಿಯಂತೆ, ನೋಂದಾಯಿತ ಸ್ಟಾರ್ಟಪ್ ಗಳ ಸಂಖ್ಯೆ 2014ರಲ್ಲಿದ್ದ 1ರಿಂದ ಈಗ ಸುಮಾರು 440ಕ್ಕೆ ಏರಿದೆ. ಖಾಸಗಿ ಹೂಡಿಕೆಗಳು ಆರು ಪಟ್ಟು ಹೆಚ್ಚಾಗಿದ್ದು, ಎಫ್ ಡಿಐ ನಿಯಮಗಳ ಸಡಿಲಿಕೆ ಮತ್ತು ಸರಕಾರದ ನೀತಿ ಸುಧಾರಣೆಗಳು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಇಸ್ರೋದ ವಾಣಿಜ್ಯ ವಿಭಾಗವಾದ ಎನ್ ಎಸ್ ಐಎಲ್ ಆದಾಯದಲ್ಲಿಭಾರಿ ಏರಿಕೆಯಾಗಿದ್ದು, ಐಎನ್ -ಸ್ಪೇಸ್ ಮೂಲಕ ಸ್ಟಾಟ್ ಅಪ್ ಗಳಿಗೆ ಧನಸಹಾಯ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿಭಾರತವು 12 ಯಶಸ್ವಿ ಉಡಾವಣೆಗಳನ್ನು ಪೂರೈಸಿ, ಬಾಹ್ಯಾಕಾಶ ವಲಯದಲ್ಲಿಜಾಗತಿಕವಾಗಿ ಹೊಸ ಮೈಲಿಗಲ್ಲುಸ್ಥಾಪಿಸುತ್ತಿದೆ.==
ಜಪಾನ್ ಲ್ಲಿಭೂಕಂಪ
ಜಪಾನ್ ನ ರಾಜಧಾನಿ ಟೋಕ್ಯೋ ಸೇರಿದಂತೆ ಪೂರ್ವ ಭಾಗದಲ್ಲಿಭಾನುವಾರ ಬೆಳಿಗ್ಗೆ ತೀವ್ರ ಭೂಕಂಪನ ಸಂಭವಿಸಿದ್ದು, ಸುಮಾರು 37 ಜನರು ಗಾಯಗೊಂಡಿದ್ದಾರೆ. ಜಪಾನ್ ಹವಾಮಾನ ಇಲಾಖೆಯ ಪ್ರಕಾರ ಭೂಕಂಪದ ತೀವ್ರತೆ 5.9ರಷ್ಟು ದಾಖಲಾಗಿದ್ದು, ಕೇಂದ್ರಬಿಂದು ಇಬರಾಕಿ ಪ್ರಾಂತ್ಯದಲ್ಲಿದೆ. ಟೋಕ್ಯೋ, ಸೈತಮಾ, ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲಮತ್ತು ದೇಶದ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿಯಾವುದೇ ಹಾನಿ ಸಂಭವಿಸಿಲ್ಲಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ತುರ್ತು ಕಾರ್ಯಪಡೆಯನ್ನು ರಚಿಸಿದ್ದು, ಮುಂದಿನ ಒಂದು ವಾರದವರೆಗೆ ಮತ್ತಷ್ಟು ಕಂಪನಗಳು ಸಂಭವಿಸಬಹುದಾದ್ದರಿಂದ ನಾಗರಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
==
ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ
ದಕ್ಷಿಣ ಆಫ್ರಿಕಾವು 2026ರೊಳಗೆ 1 ಲಕ್ಷ ಭಾರತೀಯ ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿದೆ. ವನ್ಯಜೀವಿ ಮತ್ತು ತಂಗುದಾಣಗಳತ್ತ ಭಾರತೀಯ ಯುವ ಪ್ರವಾಸಿಗರ ಆಸಕ್ತಿ ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವದ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಪ್ರವಾಸಿಗರ ಸಂಖ್ಯೆಯನ್ನು ಕೊಂಡೊಯ್ಯಲು ವೀಸಾ ಪ್ರಕ್ರಿಯೆ ಸರಳೀಕರಣ ಮತ್ತು ನೇರ ವಿಮಾನ ಸಂಪರ್ಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂಬಯಿ, ದಿಲ್ಲಿಜತೆಗೆ ರಾಜಸ್ಥಾನದಂತಹ ಹೊಸ ಮಾರುಕಟ್ಟೆಗಳತ್ತಲೂ ಗಮನ ಹರಿಸಲಾಗಿದೆ. 2027ರ ಕ್ರಿಕೆಟ್ ವಿಶ್ವಕಪ್ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಅವಕಾಶವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಅಧಿಕಾರಿ ಇಸ್ಮಾಯಿಲ್ ಡಾಕ್ರತ್ ತಿಳಿಸಿದ್ದಾರೆ.
=-
ಹಡಗು ಮುಳುಗಡೆ
ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದ ಬಂಗಾಳ ಕೊಲ್ಲಿಯಲ್ಲಿಪನಾಮ ಧ್ವಜದ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ. ಸಿಂಗಾಪುರಕ್ಕೆ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ‘ಎಂವಿ ಓಷನ್ ವಿನ್ನರ್ ’ ಹಡಗಿನಲ್ಲಿಒಟ್ಟು 24 ಸಿಬ್ಬಂದಿ ಇದ್ದರು. ಇವರಲ್ಲಿ20 ಚೀನಿಯರು, ಮ್ಯಾನ್ಮಾರ್ ನ ಮೂವರು ಹಾಗೂ ಒಬ್ಬ ಬಾಂಗ್ಲಾಪ್ರಜೆ ಸೇರಿದ್ದಾರೆ. ಶನಿವಾರ ಬೆಳಿಗ್ಗೆ ಹಡಗು ಸಂಪರ್ಕ ಕಳೆದುಕೊಂಡಿದ್ದು, ರಕ್ಷಣಾ ನೆರವು ಕೋರಿ ಮಾಹಿತಿ ಲಭ್ಯವಾಗಿದೆ. ಕೂಡಲೇ ಎಚ್ಚೆತ್ತ ಭಾರತೀಯ ಕರಾವಳಿ ಪಡೆ ಮತ್ತು ನೌಕಾಪಡೆಯು ಜಂಟಿಯಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.