Murder Of Mangalamukhi For 200 Rupees Accused Gautam Arrested
200 ರೂಪಾಯಿಗಾಗಿ ಮಂಗಳಮುಖಿ ಕೊಲೆ: ಆರೋಪಿ ಬಂಧನ
Contributed by: MANJUNATHA S|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ಮೆಜೆಸ್ಟಿಕ್ ಸಮೀಪ 200 ರೂ. ದೋಚುವ ಪ್ರಯತ್ನದಲ್ಲಿಮಂಗಳಮುಖಿಯನ್ನು ಡ್ಯಾಗರ್ ನಿಂದ ಇರಿದು ಕೊಲೆಗೈದಿದ್ದ ಆರೋಪಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಮಮೂರ್ತಿನಗರದ ನಿವಾಸಿ ಗೌತಮ್ (29) ಬಂಧಿತ. ಪಾನಮತ್ತನಾಗಿ ದ್ವಿಚಕ್ರ ವಾಹನದಲ್ಲಿಮೆಜೆಸ್ಟಿಕ್ ಗೆ ಬಂದಿದ್ದ ಗೌತಮ್ , ಶುಕ್ರವಾರ ತಡರಾತ್ರಿ 2.30ರ ಸಮಾರಿಗೆ ಬಸ್ ನಿಲ್ದಾಣದ ಹೊರಭಾಗದಲ್ಲಿನಿಂತಿದ್ದ ಮಂಗಳಮುಖಿ ದೇವಿ ಅವರ ಬಳಿ 200 ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ನಡೆದಿದೆ.
ಇದರಿಂದ ಕೋಪಗೊಂಡ ಗೌತಮ್ , ಡ್ಯಾಗರ್ ನಿಂದ ದೇವಿಯ ಎದೆ ಹಾಗೂ ಹೊಟ್ಟೆಭಾಗಕ್ಕೆ ಹಲವು ಬಾರಿ ಇರಿದಿದ್ದಾನೆ. ಇದರಿಂದ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ದೇವಿಯ ಬ್ಯಾಗ್ ನಲ್ಲಿದ್ದ ನಗದು ಮತ್ತು ಮೊಬೈಲ್ ನೊಂದಿಗೆ ಆರೋಪಿ ಪರಾರಿಯಾಗಿದ್ದ. ಘಟನೆ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಗೌತಮ್ ನನ್ನು ಬಂಧಿಸಲಾಗಿದೆ. ಆರೋಪಿಯು ಸುಲಿಗೆ ಸಲುವಾಗಿಯೇ ಮೆಜೆಸ್ಟಿಕ್ ಗೆ ಬಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.