Mandya Beggar Inherits 840 Lakhs Who Benefits From Her Wealth
ಮಳೆಗೆ ಸೇರ್ಪಡೆ
Contributed by: Shashidhara GS|Vijaya Karnataka•
ಮಂಡ್ಯ
ಭಿಕ್ಷುಕಿಯೊಬ್ಬರ ಬಳಿ 8.40 ಲಕ್ಷ ರೂ. ಇದ್ದದ್ದು ಅವರ ಮೃತರಾದ ನಂತರ ಬೆಳಕಿಗೆ ಬಂದಿದೆ.ನಗರದ ನಿವಾಸಿ ನೂರ್ (69) ಮೃತ ಭಿಕ್ಷುಕಿ. ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಈಕೆ, ಸಬ್ದರಿಯಾಬಾದ್ ಮೊಹಲ್ಲಾದ ಸ್ವಂತ ಮನೆಯಲ್ಲಿವಾಸವಿದ್ದರು. ಈಕೆಯ ಇಬ್ಬರು ಸಹೋದರರು ಬೆಂಗಳೂರಿನಲ್ಲಿವಾಸವಿದ್ದು, ಮದುವೆಯಾಗದ ಈಕೆ ಒಬ್ಬರೇ ಮಂಡ್ಯದಲ್ಲಿದ್ದರು.
ವಯೋಸಹಜ ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದು, ಸಹೋದರರು ಮಂಡ್ಯಕ್ಕೆ ಆಗಮಿಸಿ ಅಂತ್ಯಸಂಸ್ಕಾರ ನೆರವೇರಿಸಿದರು. ಈಕೆ ಭಿಕ್ಷೆ ಬೇಡಿ ಚೀಲಗಳಲ್ಲಿಸಂಗ್ರಹಿಸಿದ್ದ ನಾಣ್ಯಗಳನ್ನು ಮನೆಯಿಂದ ಮಸೀದಿಗೆ ಕೊಂಡೊಯ್ದ ಸಹೋದರರು ಎಣಿಕೆ ಮಾಡಿದರು. ಜತೆಗೆ, ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವೂ ಸೇರಿ ಒಟ್ಟಾರೆ 8.40 ಲಕ್ಷ ರೂ. ಲೆಕ್ಕ ಸಿಕ್ಕಿತು. ಈ ಹಣವನ್ನು ಸಹೋದರರು ಮತ್ತು ಸಂಬಂಧಿಕರು ಹಂಚಿಕೊಂಡರು.
ಸತ್ತಾಗ ಬಂದು ಹಣ ಹಂಚಿಕೊಂಡರು!
ನೂರ್ ಅವರನ್ನು ಸಂಬಂಧಿಕರು ನೋಡಿಕೊಳ್ಳುತ್ತಿರಲಿಲ್ಲ. ಇಬ್ಬರು ಸಹೋದರರು ಬೆಂಗಳೂರಿನಲ್ಲಿವಾಸವಿದ್ದರು. ಆಕೆ ಮೃತಪಟ್ಟ ಬಳಿಕ ಅವರ ಬಳಿ ಇದ್ದ ಹಣವನ್ನು ಹಂಚಿಕೊಂಡರು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.