ವಿಕ ಸುದ್ದಿಲೋಕ ಬೆಂಗಳೂರು ಆರಂಭಿಕ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿಎಡವಿದ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ ಎಲ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿನಾತ್ ರ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಡ್ರಾಗಷ್ಟೇ ತೃಪ್ತಿಪಟ್ಟಿತು. ಕಂಠೀರವ ಕ್ರೀಡಾಂಗಣದಲ್ಲಿಭಾನುವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿಸಮಬಲದ ಹೋರಾಟ ನೀಡಿದ ಉಭಯ ತಂಡಗಳು 1-1 ಗೋಲ್ ಗಳಿಂದ ಡ್ರಾ ಸಾಧಿಸಿ, ತಲಾ ಒಂದು ಅಂಕ ಹಂಚಿಕೊಂಡವು. ಬಿಎಫ್ ಸಿ ಪರ ಬ್ರಯಾನ್ ಸ್ಯಾಂಚೆಜ್ (19ನೇ ನಿ.) ಮತ್ತು ನಾತ್ ರ್ ಈಸ್ಟ್ ಪರ ಲಾಲ್ರಿನ್ಜುವಾಲಾ ಲಾಲ್ಬಿಯಾಕ್ನಿಯಾ(68ನೇ ನಿ.) ಗೋಲ್ ದಾಖಲಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು. ಮೊದಲಾರ್ಧದಲ್ಲಿಸ್ಯಾಂಚೆಜ್ ಗಳಿಸಿದ ಚೊಚ್ಚಲ ಗೋಲು ಬೆಂಗಳೂರು ಎಫ್ ಸಿಗೆ ಆರಂಭಿಕ ಮುನ್ನಡೆ ತಂದುಕೊಟ್ಟಿತ್ತು. ಆದರೆ, ದ್ವಿತೀಯಾರ್ಧದಲ್ಲಿಬದಲಿ ಆಟಗಾರನಾಗಿ ಕಣಕ್ಕಿಳಿದ ಲಾಲ್ರಿನ್ಜುವಾಲಾ ಲಾಲ್ಬಿಯಾಕ್ನಿಯಾ ಗೋಲು ಗಳಿಸುವ ಮೂಲಕ ಯುನೈಟೆಡ್ ತಂಡಕ್ಕೆ ಸಮಬಲ ತಂದುಕೊಟ್ಟರು. ಸದ್ಯ ಬಿಧಿಎಧಿಫ್ ಧಿಸಿ 4 ಅಂಕಗಳನ್ನು ಹೊಂದಿದ್ದು ಮುಂದಿನ ಪಂದ್ಯಧಿದಲ್ಲಿಫೆ.27ರಂದು ಪಂಜಾಬ್ ಅನ್ನು ಎದುರಿಸಲಿದೆ.

