ಭಾರತ ‘ಎ’ ಚಾಂಪಿಯನ್

Contributed bymanjunath.gowda@timesgroup.com|Vijaya Karnataka

ಭಾರತ 'ಎ' ಮಹಿಳಾ ತಂಡ ಎಸಿಸಿ ಏಷ್ಯಾ ಕಪ್‌ ರೈಸಿಂಗ್‌ ಸ್ಟಾರ್ಸ್‌ ಫೈನಲ್‌ನಲ್ಲಿ ಚಾಂಪಿಯನ್‌ ಆಗಿದೆ. ಬ್ಯಾಂಕಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು 46 ರನ್‌ಗಳಿಂದ ಸೋಲಿಸಿತು. ತೇಜಲ್‌ ಹಸಬ್ನಿಸ್‌ ಅರ್ಧ ಶತಕ, ಪ್ರೇಮಾ ರಾವತ್‌ ಮೂರು ವಿಕೆಟ್‌ ಪಡೆದು ತಂಡದ ಗೆಲುವಿಗೆ ಕಾರಣರಾದರು. ಭಾರತ ನೀಡಿದ 135 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 88 ರನ್‌ಗಳಿಗೆ ಆಲೌಟ್ ಆಯಿತು.

india a team crowned champions in asia cup under leading performance

ಬ್ಯಾಂಕಾಕ್ : ತೇಜಲ್ ಹಸಬ್ನಿಸ್ (51*; 34 ಎಸೆತ) ಅವರ ಮಿಂಚಿನ ಅರ್ಧ ಶತಕ ಹಾಗೂ ಪ್ರೇಮಾ ರಾವತ್ (12ಕ್ಕೆ 3) ಅವರ ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತ ‘ಎ’ ಮಹಿಳಾ ತಂಡ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಫೈನಲ್ ನಲ್ಲಿ46 ರನ್ ಗಳಿಂದ ಬಾಂಗ್ಲಾದೇಶ ಎ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೆರ್ಡ್ ಥೈ ಕ್ರಿಕೆಟ್ ಮೈದಾನದಲ್ಲಿಭಾನುವಾರ ನಡೆದ ಪಂದ್ಯದಲ್ಲಿಭಾರತ ನೀಡಿದ 135 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಐದು ಎಸೆತಗಳು ಬಾಕಿ ಇರುವಂತೆಯೇ 88 ರನ್ ಗಳಿಗೆ ಗಂಟುಮೂಟೆ ಕಟ್ಟಿತು. ಪ್ರೇಮಾ ಅವರಲ್ಲದೆ, ಸೋನಿಯಾ ಮತ್ತು ತನುಜಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವನ್ನು ಸುಲಭಗೊಳಿಸಿಧಿದರು. ಇದಕ್ಕೂ ಮುನ್ನ 44ಕ್ಕೆ 4 ವಿಕೆಟ್ ಕಳೆದುಕೊಂಡ ಭಾರತ, ಫಾಹಿಮಾ ಖತುನಾ (25ಕ್ಕೆ 4) ಅವರ ದಾಳಿಯ ನಡುವೆಯೂ ಪೈಪೋಟಿ ಮೊತ್ತ ದಾಖಲಿಸಿತು. ಇದಕ್ಕೆ ಜೇಜಲ್ ಮತ್ತು ನಾಯಕಿ ರಾಧ ಯಾದವ್ (36) ಸಾಕ್ಷಿಯಾದರು. ಸಂಕ್ಷಿಪ್ತಸ್ಕೋರ್ : ಭಾರತ ‘ಎ’: 20 ಓವರ್ ಗಳಲ್ಲಿ7 ವಿಕೆಟ್ ಗೆ 134. ಬಾಂಗ್ಲಾದೇಶ ‘ಎ’: 19.1 ಓವರ್ ಗಳಲ್ಲಿ88.