ಅಜೇಯ ತಂಡಗಳ ನಡುವಿನ ಹೋರಾಟ ಇಂದು

Contributed bymanjunath.gowda@timesgroup.com|Vijaya Karnataka

ಟಿ20 ವಿಶ್ವಕಪ್‌ನಲ್ಲಿ ಅಜೇಯರಾಗಿರುವ ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ತಂಡಗಳು ಸೂಪರ್‌ 8 ಹಂತದಲ್ಲಿ ಇಂದು ಸೆಣಸಾಡಲಿವೆ. ಗುಂಪು ಹಂತದಲ್ಲಿ ಆಸ್ಪ್ರೇಲಿಯಾ ಮತ್ತು ಶ್ರೀಲಂಕಾವನ್ನು ಸೋಲಿಸಿ ಜಿಂಬಾಬ್ವೆ ಅಚ್ಚರಿ ಮೂಡಿಸಿದೆ. ಎರಡು ಬಾರಿಯ ಚಾಂಪಿಯನ್ ವೆಸ್ಟ್‌ ಇಂಡೀಸ್‌ಗೆ ಜಿಂಬಾಬ್ವೆ ಗట్టి ಸವಾಲು ಒಡ್ಡಲಿದೆ. ಇತ್ತಂಡಗಳ ನಡುವಿನ ಪಂದ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರೇಕ್ಷಕರು ಬಲಿಷ್ಠ ತಂಡಗಳ ಹೋರಾಟವನ್ನು ವೀಕ್ಷಿಸಲಿದ್ದಾರೆ.

clash of titans west indies vs zimbabwe today

ಮುಂಬಯಿ: ಗುಂಪು ಹಂತದಲ್ಲಿಅಜೇಯ ದಾಖಲೆ ಕಾಯ್ದುಕೊಂಡಿರುವ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಟಿ20 ವಿಶ್ವಕಪ್ ನ ಸೂಪರ್ 8 ಹಂತದ ತಮ್ಮ ಆರಂಭಿಕ ಪಂದ್ಯದಲ್ಲಿಸೋಮವಾರ ಮುಖಾಮುಖಿಯಾಗುತ್ತಿವೆ. ಗುಂಪು ಹಂತದಲ್ಲಿಆಸ್ಪ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಬಗ್ಗು ಬಡಿಯುವ ಮೂಲಕ ಅಚ್ಚರಿ ಫಲಿತಾಂಶ ನೀಡಿರುವ ಜಿಂಬಾಬ್ವೆ ವಿರುದ್ಧ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಎಚ್ಚರಿಕೆ ಆಟವಾಡಲು ಯೋಜಿಸುತ್ತಿದೆ. ಸೂಪರ್ 8 ಹಂತಕ್ಕೂ ಮುನ್ನ ಉಭಯ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂಗಮನಾರ್ಹ ಪ್ರದರ್ಶನ ನೀಡಿರುವ ಕಾರಣ ಸೋಮವಾರ ಪಂದ್ಯದಲ್ಲಿಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿಇಂಗ್ಲೆಂಡ್ ಹೊರತುಧಿಪಡಿಸಿ ಅಸೋಸಿಯೇಟ್ ರಾಷ್ಟ್ರಗಳನ್ನು ಸುಲಭವಾಗಿ ಮಣಿಸಿರುವ ವೆಸ್ಟ್ ಇಂಡೀಸ್ ಗೆ ಜಿಂಬಾಬ್ವೆ ಅಸಲಿ ಸವಾಲು ಒಡ್ಡುವ ಸಾಧ್ಯತೆ ಇದೆ. ಮೂರನೇ ಬಾರಿ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಲು ಎದುರು ನೋಡುತ್ತಿರುವ ವೆಸ್ಟ್ ಇಂಡೀಸ್ ಗೆ ಜಿಂಬಾಬ್ವೆ ಹೇಗೆ ತಡೆಯೊಡ್ಡಲಿದೆ ಎಂಬುದನ್ನು ಕಾದು ನೋಡಬೇಕು. ಅತ್ತ ಐರ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೂ ತನ್ನ ಅಂತಿಮ ಗುಂಪು ಪಂದ್ಯದಲ್ಲಿಸಹ ಆತಿಥೇಯ ಶ್ರೀಲಂಕಾ ವಿರುದ್ಧ ಗೆದ್ದು ಬೀಗಿರುವ ಜಿಂಬಾಬ್ವೆ, ಕೆರಿಬಿಯನ್ನರಿಗೆ ಆಘಾತ ನೀಡಲು ಹಾತೊರೆಯುತ್ತಿದೆ. ಹೀಗಾಗಿ ವಾಂಖೆಡೆ ಕ್ರೀಡಾಂಗದಲ್ಲಿಸೋಮವಾರ ಎರಡು ಬಲಿಷ್ಠ ತಂಡಗಳ ನಡುವಿನ ಸೆಣಸಾಟಕ್ಕೆ ಪ್ರೇಕ್ಷಕರು ಸಾಕ್ಷಿಯಾಗಬಹುದು.