ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟು ಅವಶ್ಯ

Contributed bykavancariappacoorg@gmail.com|Vijaya Karnataka

ತೋಳೂರುಶೆಟ್ಟಳ್ಳಿಯಲ್ಲಿ ನಡೆದ ಹಿಂದೂ ಸಂಗಮದಲ್ಲಿ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟು ಮುಖ್ಯ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವೆ ಶ್ಲಾಘಿಸಿದರು. ಭರತ್‌ ರಾಜ್‌ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯ ತಿಳಿಸಿದರು. ಪಾಶ್ಚಾತ್ಯ ಸಂಸ್ಕೃತಿ ಬಿಟ್ಟು ಸ್ವದೇಶಿ ಜೀವನಶೈಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಮುಂದಿನ ಪೀಳಿಗೆಗೆ ಸಂಸ್ಕಾರ ನೀಡಲು ಸಂಸ್ಕೃತಿ ಉಳಿಸಬೇಕೆಂದರು.

call for unity and protection of hindu dharma by shri swatantra basavaling swamiji

ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಪ್ರತಿಪಾದನೆ | ತೋಳೂರು ಹಿಂದೂ ಸಂಗಮ ಸಮಾವೇಶ

ವಿಕ ಸುದ್ದಿಲೋಕ ಸೋಮವಾರಪೇಟೆ

ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ನಮ್ಮೆಲ್ಲರ ಒಗ್ಗಟ್ಟಿನ ಅವಶ್ಯಕತೆ ಇದೆ ಎಂದು ಬಸವಾಪಟ್ಟಣದ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹೇಳಿದರು.

ಹಿಂದೂ ಸಂಗಮ ಆಯೋಜನಾ ಸಮಿತಿಯ ತೋಳೂರುಶೆಟ್ಟಳ್ಳಿ ಮಂಡಲ ವತಿಯಿಂದ ದೊಡ್ಡ ತೋಳೂರು ಗ್ರಾಮದ ಆಟದ ಮೈದಾನದಲ್ಲಿಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘‘ಸಮಸ್ತ ಹಿಂದೂಗಳನ್ನು ಒಂದು ಗೂಡಿಸುವ ಉದ್ದೇಶದಿಂದ ಇಂತ ಕಾರ್ಯಕ್ರಮ ಅತ್ಯವಶ್ಯಕವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವ ಸೇವೆಯನ್ನು ಮಾತಿನಲ್ಲಿವರ್ಣಿಸಲು ಸಾಧ್ಯವಿಲ್ಲ. ಅಖಂಡ ಭಾರತ ವಿಭಜನೆಯಾದ ಬಳಿಕ ಮತ್ತೆ ದೇಶವನ್ನು ಒಂದಾಗಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ,’’ ಎಂದು ಪ್ರಶಂಸಿಸಿದರು.

‘‘ಸನಾತನ ಹಿಂದೂ ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅನಿವಾರ್ಯವಾಗಿದ್ದು, ಹಿಂದೂಗಳು ಒಂದಾದರೆ ಅನೇಕ ಸಮಸ್ಯೆಗಳು ತಾನಾಗಿ ಪರಿಹಾರವಾಗುತ್ತವೆ,’’ ಎಂದರು.

ದಿಕ್ಕೂಚಿ ಭಾಷಣ ಮಾಡಿದ ಆರ್ ಎಸ್ ಎಸ್ ಮಂಗಳೂರು ವಿಭಾಗ ಸಹ ಸೇವಾ ಪ್ರಮುಖ್ ಭರತ್ ರಾಜ್ , ‘‘ಸಮಾಜದಲ್ಲಿಜಾಗೃತಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿಹಿಂದೂ ಸಂಘಟನೆ ಯೋಜನಾ ಸಮಿತಿಗಳು ಪ್ರತಿ ಮಂಡಲಗಳಲ್ಲೂಹಿಂದೂ ಸಂಗಮ ಕಾರ್ಯಕ್ರಮ ನಡೆಸುತ್ತಿದೆ. ನಮ್ಮರಾಷ್ಟ್ರ,ನಮ್ಮ ಸಂಸ್ಕೃತಿ, ನಮ್ಮಧರ್ಮದ ರಕ್ಷಣೆಯಲ್ಲಿನಮ್ಮ ಪಾತ್ರಗಳು ಏನು ಎಂಬುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿದೆ,’’ ಎಂದರು.

‘‘ಪಾಶ್ಚಾತ್ಯ ಸಂಸ್ಕೃತಿಯಂತೆ ಹುಟ್ಟುಹಬ್ಬ ಆಚರಣೆ ಮಾಡುವುದನ್ನು ಬಿಟ್ಟು, ಸನಾತನ ಧರ್ಮದಂತೆ ಆಚರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವದೇಶಿ ಜೀವನಶೈಲಿ ಹಾಗೂ ಸಂಸ್ಕೃತಿಗಳನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೀಡಬೇಕಾದರೆ ಅದನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ,’’ ಎಂದು ಹೇಳಿದರು.

ಉದ್ಯಮಿ ಹರಪಳ್ಳಿ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಗಮ ಆಯೋಜನ ಸಮಿತಿಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸನತ್ ಕರ್ಕಳ್ಳಿ, ಹಿಂದೂ ಸಂಗಮ ಆಯೋಜನ ಸಮಿತಿಯ ಮಂಡಲ ಅಧ್ಯಕ್ಷ ವಣಗೂರುಕೊಪ್ಪ ಉಮೇಶ್ ಇದ್ದರು.

ತೋಳೂರುಶೆಟ್ಟಳ್ಳಿಯ ಜಂಕ್ಷನ್ ವಾದ್ಯ ಹಾಗೂ ನಾಸಿಕ್ ಬ್ಯಾಂಡ್ ನೊಂದಿಗೆ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿಶೋಭಾಯಾತ್ರೆ ನಡೆಯಿತು. ಮಹಿಳೆಯರು ಕಳಸದೊಂದಿಗೆ ಮೆರವಣಿಗೆಯಲ್ಲಿಸಾಗಿದರು.

ಎಂಡಿಕೆ8ಎಸ್ ಪಿಟಿ3: ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿಯಲ್ಲಿನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

ಎಂಡಿಕೆ8ಎಸ್ ಪಿಟಿ4:ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿಯಲ್ಲಿನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಬಸವ ಪಟ್ಟಣದ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿಜೀ ಉದ್ಘಾಟಿಸಿದರು.