ಕರಾಟೆ ಪಂದ್ಯಾವಳಿ- ತಂಡದ ಆಯ್ಕೆಗೆ ಚಾಲನೆ
ವಿಕ ಸುದ್ದಿಲೋಕ ಸಂತೆಬೆನ್ನೂರು
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಜಗತ್ತಿಗೆ ಗ್ರಾಮೀಣ ಪ್ರತಿಭೆಗಳ ಕೊಡುಗೆ ಅಪಾರವಾಗಿದೆ. ಇಂತಹ ಕ್ರೀಡಾಕೂಟಗಳು ಗ್ರಾಮೀಣ ಮಟ್ಟದಲ್ಲಿನಡೆಯುವುದರಿಂದ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ಸಿಡಿಸಿ ಕಾರ್ಯಾಧ್ಯಕ್ಷ ಎಂ.ಸಿದ್ದಪ್ಪ ಹೇಳಿದರು.
ಚನ್ನಗಿರಿ ತಾಲೂಕು ಸಂತೆಬೆನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದಾವಣಗೆರೆ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಆಶ್ರಯದಲ್ಲಿಸೋಮವಾರ ಹಮ್ಮಿಕೊಂಡಿದ್ದ ದಾವಣಗೆರೆ ವಿವಿ ತಂಡದ ಆಯ್ಕೆ ಹಾಗೂ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ನಮ್ಮ ಸಂಸ್ಕೃತಿ ಮತ್ತು ದೇಶವದ ಪ್ರತಿನಿಧಿಯಾಗಿ ಕೀರ್ತಿ ತರುತ್ತದೆ. ಇನ್ನು ಹೆಚ್ಚಿನ ಕ್ರೀಡಾ ಕೂಟಗಳು ನಮ್ಮ ಗ್ರಾಮದಲ್ಲಿನಡೆಯಲಿ. ಇದಕ್ಕೆ ನಮ್ಮ ಗ್ರಾಮಸ್ಥರು ಹಾಗೂ ಸಿಡಿಸಿ ಸಮಿತಿ ಸಹಕಾರ ನೀಡುತ್ತದೆ ಎಂದರು.
ದೈಹಿಕ ನಿರ್ದೇಶಕ ಡಾ.ಕೆ.ಎಂ. ವೀರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕಾಲೇಜು 2007ರಲ್ಲಿಪ್ರಾರಂಭವಾಗಿ ವಿವಿ ಮಟ್ಟದ ಕ್ರಾಸ್ ಕಂಟ್ರಿ ರೇಸ್ , ಅಥ್ಲೇಟಿಕ್ಸ್ , ವಾಲಿಬಾಲ್ ಹಾಗೂ ಕರಾಟೆ ಪಂದ್ಯಾವಳಿಗಳು ಯಶಸ್ವಿಯಾಗಿ ಜರುಗಿವೆ. ಇಂದು ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿಕರಾಟೆ ಹೆಚ್ಚು ಪ್ರಚಲಿತವಾಗಿದ್ದು, ಇಂದು ವಿವಿ ತಂಡ ಆಯ್ಕೆ ನಮ್ಮ ಕಾಲೇಜಿನಲ್ಲಿನಡೆಯುತ್ತಿದೆ. ಪಂದ್ಯಾವಳಿಯಲ್ಲಿ20ಕ್ಕೂ ಹೆಚ್ಚು ಕಾಲೇಜಿನ 60 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಪ್ರಾಂಶುಪಾಲ ಡಾ.ಎಸ್ . ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯ ಕೆ.ಪಿ. ಗಿರೀಶ್ , ಡಿ.ಬಿ. ಕಿರಣ್ , ಗ್ರಾಪಂ ಮಾಜಿ ಅಧ್ಯಕ್ಷೆ ರೇಷ್ಮಾಖಾನಂ ಅಮ್ಜದ್ , ಪಿಡಿಒ ಉಮೇಶ್ ತಾಲಿಕಟ್ಟೆ, ವಿವಿಯ ದೈಹಿಕ ನಿರ್ದೇಶಕ ಡಾ.ಪ್ರಸನ್ನ ಕುಮಾರ್ , ರಾಜ್ಯ ರೆಪ್ರಿ ಕೆ.ಪಿ.ಕೌಶಿ ಜೋಷ್ , ರಾಘವೇಂದ್ರ, ಡಾ.ರಾಜಶೇಖರ್ ಮೂಲಿಮನಿ, ವಿಜಯ್ , ದಿವ್ಯ, ತೀರ್ಪುಗಾರರು, ಪ್ರಾಧ್ಯಾಪಕರು ಇದ್ದರು.
------
09 ಎಸ್ ಬಿಆರ್ 01
ಸಂತೆಬೆನ್ನೂರು ಪದವಿ ಕಾಲೇಜಿನಲ್ಲಿಸೋಮವಾರ ನಡೆದ ಕರಾಟೆ ಪಂದ್ಯಾವಳಿ ಮತ್ತು ವಿವಿ ತಂಡದ ಆಯ್ಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

