ಮೂಡಲಗಿ: ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಭೂದಾನಿ ದಿ. ಕೃಷ್ಣಪ್ಪ ಹ. ಸೋನವಾಲಕರ ಅವರ 82ನೇ ಜನ್ಮದಿನಾಚರಣೆ ಅಂಗವಾಗಿ, 10ನೇ ರಕ್ತದಾನ ಶಿಬಿರ ಮತ್ತು ಕೆ.ಎಚ್ . ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿಕೊಠಡಿಗಳ ಉದ್ಘಾಟನಾ ಸಮಾರಂಭ ಫೆ. 10ರಂದು ಬೆಳಗ್ಗೆ 9ಕ್ಕೆ ಜರುಗಲಿವೆ. ರಕ್ತದಾನ ಶಿಬಿರ ಮತ್ತು ಕೊಠಡಿಗಳ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆರವೇರಿಸುವರು. ವಿಜ್ಞಾನ ಪ್ರಯೋಗಾಲಯವನ್ನು ಸಂಸದ ಜಗದೀಶ ಶೆಟ್ಟರ್ , ಚಿತ್ರಕಲಾ ಕೊಠಡಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ, ಕ್ರೀಡಾ ಕೊಠಡಿಯನ್ನು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಗ್ರಂಥಾಲಯವನ್ನು ಜಿ.ಪಂ. ಸಿಇಒ ರಾಹುಲ್ ಶಿಂಧೆ ಉದ್ಘಾಟಿಸುವರು. ಡಾ. ಗಿರೀಶ ಸೋನವಾಲಕರ ಅಧ್ಯಕ್ಷತೆ ವಹಿಸುವರು. ಲಕ್ಷ್ಮೇಬಾಯಿ ಕೃ ಸೋನವಾಲಕರ, ಅಧಿಕಾರಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎರೆಹೊಸಹಳ್ಳಿಯ ವೇಮನಾನಂದ ಸ್ವಾಮೀಜಿ, ಪಟ್ಟಣದ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

