ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ
ಬಾಗಲಕೋಟೆ: ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ನಿಮಿತ್ತ ನಗರದಲ್ಲಿಮಾ.1 ರಂದು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿನಡೆಯುವ ಜಯಂತಿ ಆಚರಣೆಯಲ್ಲಿಬೆಳಗ್ಗೆ 8.30 ಕ್ಕೆ ಬವಿವ ಸಂಘದ ಆವರಣದಲ್ಲಿರುವ ಬೀಳೂರು ಅಜ್ಜನವರ ಗುಡಿಯಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭವಾಗಿ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ವಲ್ಲಭಭಾಯಿ ಚೌಕ, ಅಡತ ಬಜಾರದಿಂದ ಟೀಕಿನಮಠದ ಮೂಲಕ ಮರಳಿ ಬೀಳೂರು ಅಜ್ಜನವರ ಗುಡಿ ಆವರಣದಲ್ಲಿಸಮಾವೇಶಗೊಳ್ಳಲಿದೆ. ಬಿಲ್ ಕೆರೂರು ಬಿಲ್ವಾಶ್ರಮದ ಸಿದ್ದಲಿಂಗ ಸ್ವಾಮೀಜಿ ಹಾಗೂ ಬವಿವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮೆರವಣಿಗೆಗೆ ಚಾಲನೆ ನೀಡುವರು.

