ರೈತ ಆತ್ಮಹತ್ಯೆ

Contributed byskchoudhari121@gmail.com|Vijaya Karnataka

A farmer named Mallappa Tarapur from Bandaraawada village ended his life by hanging. He was reportedly distressed over a failed crop this season. Facing significant debt from both a bank and private lenders, he could not bear the financial burden. The incident has been registered with the Devala Gaanagaapura police.

afzalpur farmer suicide crop failure and bank private debt pressure

(8ಎಎಫ್ ಝಡ್ 4 -ಚಿತ್ರ: ಮಲ್ಲಪ್ಪ ತಾರಾಪುರ)

ರೈತ ಆತ್ಮಹತ್ಯೆ

ಅಫಜಲಪುರ: ತಾಲೂಕಿನ ಬಂದರವಾಡ ಗ್ರಾಮದ ಮಲ್ಲಪ್ಪ ತಾರಾಪುರ(58) ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ತಮ್ಮ ಜಮೀನಿಗೆ ತೆರಳಿದ್ದಾರೆ. ಈ ಬಾರಿ ಯಾವುದೇ ಬೆಳೆ ಸರಿಯಾಗಿ ಬೆಳೆದಿಲ್ಲಎಂದು ಮನನೊಂದಿದ್ದಾರೆಂದು ತಿಳಿದು ಬಂದಿದೆ. ಅಲ್ಲದೆ ಬ್ಯಾಂಕ್ ನಲ್ಲಿ 2 ಲಕ್ಷ ರೂ., ಖಾಸಗಿ 5 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಪಾರ ಬಂಧು ಬಳಗವಿದೆ. ಈ ಕುರಿತು ದೇವಲ ಗಾಣಗಾಪುರ ಪೋಲಿಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

---------

28 ಎಎಫ್ ಝಡ್ -5

ಕಚುಸಾಪ ಸಮ್ಮೇಳನ: ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಅಧ್ಯಕ್ಷ

ವಿಕ ಸುದ್ದಿಲೋಕ ಅಫಜಲಪುರ

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ 14ನೇ ಸಮ್ಮೇಳನದ ಅಧ್ಯಕ್ಷರಾಗಿ ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ. ಕಲಬುರಗಿಯ ವಿಮಾನ ನಿಲ್ದಾಣ ಬಳಿಯ ಶ್ರೀ ನಿವಾಸ ಸರಡಗಿ ಹಿರೇಮಠದ ಆವರಣದಲ್ಲಿ ಏಪ್ರಿಲ್ ತಿಂಗಳಿನಲ್ಲಿಸಮ್ಮೇಳನ ನಡೆಯಲಿದ್ದು, ಸರಡಗಿ ರೇವಣಸಿದ್ದ ಶಿವಾಚಾರ್ಯರು ಮತ್ತು ಬಸವಕಲ್ಯಾಣ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದು ಕುಲಕರ್ಣಿ ತಿಳಿಸಿದ್ದಾರೆ.