ಕತ್ತು ಕೊಯ್ದು ಯುವಕನ ಕೊಲೆ

Contributed bybeerappapujar93@gmail.com|Vijaya Karnataka

A shocking incident has occurred in Shigligrama, Lakshmeshwara taluk. A young man was brutally murdered by slitting his throat on Friday night. The deceased has been identified as Mahammad Farooq Sheikh Sanadi, aged 25. He was a resident of Harlapur village in Kundagola taluk, Dharwad district, but was currently residing in Shigligrama.

murder of a youth stabbed to death brutal killing in shigligram

ಕತ್ತು ಕೊಯ್ದು ಯುವಕನ ಕೊಲೆ

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿಗ್ರಾಮದ ಯುವಕನನ್ನು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ದುರ್ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತನನ್ನು ಮಹ್ಮದ್ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ನಿವಾಸಿ ಆಗಿರುವ ಫಾರೂಕ್ ಸದ್ಯ ಶಿಗ್ಲಿಗ್ರಾಮದಲ್ಲಿವಾಸವಾಗಿದ್ದ. ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.