ಮಾ.2ರಿಂದ ರಂಗಸಂಭ್ರಮ ನಾಟಕೋತ್ಸವ

Contributed bykeshavmurthy8@gmail.com|Vijaya Karnataka

Mysuru will witness the Rangasambrama Natakotsava from March 2 to 4. The Nadaranaga organization is hosting the event at Kalamandira's mini theatre. The festival features plays like 'Muddannana Promotion Prasanga', 'Madari Madayya', and 'Samrat Ashoka'. Entry to all performances is free. This cultural event promises an engaging theatrical experience for the public.

rangasambhrama theatre festival from march 2 in mysuru three days of free entry drama performances

ಮಾ.2ರಿಂದ ರಂಗಸಂಭ್ರಮ ನಾಟಕೋತ್ಸವ

ಮೈಸೂರು: ನಾದರಂಗ ಸಂಸ್ಥೆ ವತಿಯಿಂದ ಮಾ.2, 3, 4ರಂದು ರಂಗಸಂಭ್ರಮ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ತಿಳಿಸಿದರು.

ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿಮಾ.2 ರಂದು ರಾತ್ರಿ 7ಕ್ಕೆ ರಂಗಾನಂದ ಕಲಾ ಸಂಘದಿಂದ ರಾಜೇಂದ್ರ ಕಾರಂತ ವಿರಚಿತ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ, ಮಾ.3ರಂದು ಸಂಜೆ 5.45ಕ್ಕೆ ಪೌರಾಣಿಕ ರಂಗಗೀತೆ, ರಾತ್ರಿ 7ಕ್ಕೆ ಅಭ್ಯಾಸಿ ಟ್ರಸ್ಟ್ ನಿಂದ ಡಾ.ಎಚ್ .ಎಸ್ . ಶಿವಪ್ರಕಾಶ್ ಅವರ ಮಾದಾರಿ ಮಾದಯ್ಯ, ಮಾ.4ರಂದು ರಾತ್ರಿ 7ಕ್ಕೆ ಎನ್ .ಎಸ್ . ರಾವ್ ವಿರಚಿತ ಸಾಮ್ರಾಟ್ ಅಶೋಕ ನಾಟಕ ಪ್ರದರ್ಶಗೊಳ್ಳಲಿವೆ. ಇವೆಲ್ಲಕ್ಕೂ ಉಚಿತ ಪ್ರವೇಶವಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿಹೇಳಿದರು.