ವಿಜೃಂಭಣೆ ಶ್ರೀ ಗುರು ಕರಿಬಸವೇಶ್ವರ ರಥೋತ್ಸವ
ವಿಕ ಸುದ್ದಿಲೋಕ ಮೊಳಕಾಲ್ಮುರು
ತಾಲೂಕಿನ ಜಾಗೀರ ಬುಡ್ಡೇನಹಳ್ಳಿಯಲ್ಲಿಶುಕ್ರವಾರ ಸಂಜೆ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿಸಲಾಯಿತು.
ರಥೋತ್ಸವದ ಪ್ರಯುಕ್ತ ಗುರುವಾರ ಸಂಜೆ ಶ್ರೀ ಈಶ್ವರ ದೇವಸ್ಥಾನದಲ್ಲಿರುದ್ರಾಭಿಷೇಕ ನೆರವೇರಿಸಿ ರಥಕ್ಕೆ ಕಳಸ ಹಾಗೂ ಕಂಕಣಕಟ್ಟುವುದರೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಶುಕ್ರವಾರ ಬೆಳಗ್ಗೆ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿಸ್ವಾಮಿಗೆ ಅಭಿಷೇಕ ಸಲ್ಲಿಸಿ ಇಲ್ಲಿಂದಲೇ ಗಂಗಾಜಲವನ್ನು ಕಾಶಿವೇಷಧಾರಿಗಳೊಂದಿಗೆ ಮಂಗಳ ವಾದ್ಯಗಳ ಸಹಿತ ಮೆರವಣಿಗೆ ಮೂಲಕ ತಾತಾನ ಗದ್ದುಗೆಗೆ ತಂದು ರುದ್ರಾಭಿಷೇಕ ಮಾಡಲಾಯಿತು. ಸಂಜೆ 5 ಗಂಟೆ ಸುಮಾರಿಗೆ ಡೊಳ್ಳು ಕುಣಿತ , ನಂದಿಧ್ವಜ ಮತ್ತು ಮಂಗಳವಾದ್ಯಗಳ ಮೂಲಕ ಮಹಾ ರಥೋತ್ಸವ ನಡೆಸಲಾಯಿತು.
ಶನಿವಾರ ಸಂಜೆ 4 ಗಂಟೆಗೆ ಪಲ್ಲಕ್ಕಿ ಉತ್ಸವವನ್ನು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ ಆನಂತರ ಮೆರವಣಿಗೆಯನ್ನು ಪಾದಗಟ್ಟೆವರೆಗೂ ಕರೆದೊಯ್ದು ದೇವಸ್ಥಾನಕ್ಕೆ ತರಲಾಯಿತು.
ರಥೋತ್ಸವದ ಸಾನ್ನಿಧ್ಯವನ್ನು ಉರವಕೊಂಡ ಗವಿಪೀಠದ ಚನ್ನಬಸವ ರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ರಥೋತ್ಸವದಲ್ಲಿರಾಂಪುರ ಮಠದ ವೀರಭದ್ರಯ್ಯ ಸ್ವಾಮಿ, ಅಶೋಕ ಸಿದ್ದಾಪುರ ಬ್ರಹ್ಮಗಿರಿ ಬೆಟ್ಟದ ಸೋಮಶೇಖರ ಸ್ವಾಮೀಜಿ, ರುದ್ರಾಕ್ಷಿ ಮಠದ ಡಾ.ವೀರಭದ್ರಯ್ಯ ಸ್ವಾಮೀಜಿ ಹಾಗೂ ಅರ್ಚಕರಾದ ಬಸವಲಿಂಗಯ್ಯ ಹಿರೇಮಠ ಸ್ವಾಮಿ, ಪುರೋಹಿತರಾದ ವಿದ್ಯಾಶಾಸ್ತ್ರೀ ಪಾಲ್ಗೊಂಡಿದ್ದರು.
---
28 ಎಂಎಲ್ ಕೆ ಪಿ 2
ಮೊಳಕಾಲ್ಮುರು ತಾಲೂಕು ಜಾಗೀರ ಬುಡ್ಡೇನಹಳ್ಳಿಯಲ್ಲಿಶುಕ್ರವಾರ ಸಂಜೆ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

