ಸರಕಾರಿ ಕ್ಷೇತ್ರದಲ್ಲಿವಿಪರೀತ ಭ್ರಷ್ಟಾಚಾರ

Contributed bysheshu0147@gmail.com|Vijaya Karnataka

Retired judge H.M. Shivakumaraswamy voiced deep concern regarding widespread corruption within government services. He highlighted that officials often demand bribes for public work. Shivakumaraswamy stressed the urgent need for increased public awareness about the illegality of both giving and taking bribes. He suggested that educating citizens on proper procedures would help curb corrupt practices.

widespread corruption in the government sector retired justice hm shivakumaraswamy expresses concern

ನಿವೃತ್ತ ನ್ಯಾಯಾಧೀಶ ಎಚ್ .ಎಂ.ಶಿವಕುಮಾರಸ್ವಾಮಿ ಕಳವಳ

ವಿಕ ಸುದ್ದಿಲೋಕ

ಸಾರ್ವಜನಿಕರಲ್ಲಿಲಂಚ ಪಡೆಯುವುದು, ಕೊಡುವುದು ತಪ್ಪೆಂಬ ಅರಿವಾಗಬೇಕಿದೆ ಎಂದು ನಿವೃತ್ತ ನ್ಯಾಯಾಧೀಶ ಎಚ್ .ಎಂ.ಶಿವಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರಾರ ಯಚರಣೆ ಸಮಿತಿಯ ರಾಜ್ಯ ಘಟಕ ಆಯೋಜಿಸಿದ್ದ ಜಿಲ್ಲಾಘಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘‘ಸರಕಾರಿ ಸೇವಾ ಕ್ಷೇತ್ರದಲ್ಲಿಭ್ರಷ್ಟಾಚಾರ ವಿಪರೀತ ವಾಗಿದೆ. ಸಾರ್ವಜನಿಕ ಕೆಲಸ ಮಾಡಬೇಕಾದ ಅಧಿಕಾರಿಗಳು, ನೌಕರರು ಲಂಚ ಪಡೆಯದೆ ಸೇವೆ ನೀಡುತ್ತಿಲ್ಲ. ಲಂಚಗುಳಿತನ ನಿರ್ಮೂಲನೆ ಬಗ್ಗೆ ಅರಿವು-ಜಾಗೃತಿ ಹೆಚ್ಚಿಸಬೇಕಿದೆ. ಜನರಲ್ಲಿಸಮಯದ ಅಭಾವ, ಅಲೆಯುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಲಂಚ ಕೊಡುವವರು ಇದ್ದಾರೆ. ಯಾವ ಕಚೇರಿಗೆ ಹೋಗಿ ಕೆಲಸ ಪೂರ್ಣ ಮುಗಿಸಿಕೊಂಡು ಬರಬೇಕು ಎನ್ನುವ ಅರಿವು ಇರದವರೂ ಇದ್ದಾರೆ. ಇದರಿಂದ ಭ್ರಷ್ಟಾಚಾರ ನಡೆಯುತ್ತದೆ. ಇಂತಹ ಸನ್ನಿವೇಶದಲ್ಲಿಜನಸಾಮಾನ್ಯರಿಗೆ ಅಗತ್ಯ ಅರಿವು ಮೂಡಿಸಬೇಕಾಗಿದೆ,’’ ಎಂದು ಸಲಹೆ ನೀಡಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ,‘‘ನಿವೃತ್ತಗೊಂಡ ನೌಕರರು ಒಗ್ಗೂಡಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅರಿವು ಮೂಡಿಸುವ ಚಟುವಟಿಕೆ ರೂಪಿಸುತ್ತಿರುವುದು ಶ್ಲಾಘನೀಯ. ತನ್ನದೇ ಆದ ರೀತಿಯಲ್ಲಿಸಮಾಜಕ್ಕೆ ಸೇವೆ ಮತ್ತು ಕೊಡುಗೆ ನೀಡಲು ಮುಂದಾಗಿರುವ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರಾರ ಯಚರಣೆ ಸಮಿತಿಯ ಪದಾಧಿಕಾರಿಗಳ ನಿರ್ಧಾರ ಅತ್ಯುತ್ತಮವಾಗಿದೆ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿರುವ ಎಲ್ಲರಿಗೂ ಒಳಿತಾಗಲಿ,’’ ಎಂದು ಆಶಿಸಿದರು.

ಕಾರ ್ಯಕ್ರಮದಲ್ಲಿಸಮಿತಿ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ , ಮಹಿಳಾ ರಾಜ್ಯಾಧ್ಯಕ್ಷೆ ರಜಿನಿರಾಜ್ , ಜಿಲ್ಲಾಧ್ಯಕ್ಷ ಪ್ರಕಾಶ್ , ಗೌರವಾಧ್ಯಕ್ಷ ಕೃಷ್ಣ ಅರಸ್ , ಪ್ರಧಾನ ಕಾರ್ಯದರ್ಶಿ ಕೆ.ದಯಾನಂದ್ , ಶ್ರೀಶೈಲ ವಿ.ಕುಂಬಾರ, ಕೃಷÜ್ಣಪ್ಪ, ಎಸ್ .ಗುರುಸ್ವಾಮಿ ಭಾಗವಹಿಸಿದ್ದರು.

ಎಸ್ ಎಂಡಿವೈ-ಎಸ್ -28-5

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರಾರ ಯಚರಣೆ ಸಮಿತಿಯ ಜಿಲ್ಲಾಘಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳ ಸಮಾವೇಶಕ್ಕೆ ನಿವೃತ್ತ ನ್ಯಾಯಾಧೀಶ ಎಚ್ .ಎಂ. ಶಿವಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.