ಯುವ ಜನರು ಪರಿಸರದೊಂದಿಗೆ ದಿನ ಆರಂಭಿಸಬೇಕು

Contributed bymanjuvkpresssdl@gmail.com|Vijaya Karnataka

Jangamakote Government High School celebrated Environment Protection Day. State awardee Dr. Gumpu Marada Anand urged students to connect with nature. He encouraged planting saplings on special occasions. The event saw the planting of various sapling varieties within the school premises. Activist K.S. Narayanaswamy and Eco Club secretary Lata were present. Students participated actively in the initiative.

youth join hands for environmental protection start the day with the environment and plant saplings as part of awareness programs

ಜಂಗಮಕೋಟೆ ಸರಕಾರಿ ಪ್ರೌಢಶಾಲೆಯಲ್ಲಿಪರಿಸರ ಸಂರಕ್ಷಣೆ ದಿನ

ವಿಕ ಸುದ್ದಿಲೋಕ ಶಿಡ್ಲಘಟ್ಟ

ಪ್ರತಿಯೊಬ್ಬ ವಿದ್ಯಾರ್ಥಿ, ಯುವ ಜನರು ಪ್ರಕೃತಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು, ಪ್ರಕೃತಿ ಬಿಟ್ಟು ನಮ್ಮ ಬದುಕು ಇಲ್ಲಎಂಬುದನ್ನು ಮನವರಿಕೆ ಮಾಡಿಕೊಂಡು ಪ್ರಕೃತಿಯನ್ನು ಬೆಳೆಸಿ ಉಳಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕೆಂದು ರಾಜ್ಯ ಪ್ರಶಸ್ತಿ ವಿಜೇತ ಡಾ. ಗುಂಪು ಮರದ ಆನಂದ್ ತಿಳಿಸಿದರು.

ತಾಲೂಕಿನ ಜಂಗಮಕೋಟೆ ಸರಕಾರಿ ಪ್ರೌಢಶಾಲೆಯಲ್ಲಿಇಕೋ ಕ್ಲಬ್ ಹಾಗೂ ಸಮಾನ ಮನಸ್ಕರ ಪರಿಸರ ಸಂರಕ್ಷಣೆ ವೇದಿಕೆ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಮಕ್ಕಳಿಗೆ ಪರಿಸರ ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಬದುಕನ್ನು ಪರಿಸರೊಂದಿಗೆ ಆರಂಭಿಸಬೇಕು, ಹುಟ್ಟು ಹಬ್ಬ, ವಾರ್ಷಿಕೋತ್ಸವ ಇನ್ನಿತರೆ ನೆಪದಲ್ಲಿಒಂದೊಂದು ಗಿಡ ನೆಡಬೇಕು, ಇತರರಿಗೂ ಸಸಿ ನೆಡುವಂತೆ ಪ್ರೇರೇಪಿಸಬೇಕು. ಈ ಮೂಲಕ ಪರಿಸರ ಬೆಳೆಸುವ ಕೆಲಸ ನಮ್ಮೆಲ್ಲರಿಂದಲೂ ಆಗಬೇಕಿದೆ ಎಂದರು.

ಪರಿಸರ ಉಳಿಸಿ ಸಂರಕ್ಷಿಸಿದ ಅನೇಕ ಮಹನೀಯರು ನಮ್ಮಲ್ಲಿದ್ದಾರೆ. ಅವರಲ್ಲಿಸಾಲು ಮರದ ತಿಮ್ಮಕ್ಕ ಪ್ರಮುಖರಾಗಿದ್ದು ಅಂಥವರನ್ನು ಪ್ರೇರಣೆಯಾಗಿಟ್ಟುಕೊಂಡು ನಾವು ಅವರ ಹಾದಿಯಲ್ಲಿಸಾಗಬೇಕಿದೆ ಎಂದು ಮನವಿ ಮಾಡಿದರು.

ಶಾಲಾ ಆವರಣದಲ್ಲಿವಿವಿಧ ತಳಿಯ ಸಸಿಗಳನ್ನು ನೆಡಲಾಯಿತು. ಹೋರಾಟಗಾರ ಕೆ.ಎಸ್ . ನಾರಾಯಣಸ್ವಾಮಿ, ಇಕೋ ಕ್ಲಬ್ ಕಾರ್ಯದರ್ಶಿ ಲತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

22ಎಸ್ ಡಿಎಲ್ 2

ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಸರಕಾರಿ ಪ್ರೌಢಶಾಲೆಯಲ್ಲಿಪರಿಸರ ಸಂರಕ್ಷಣೆ ದಿನ ಆಚರಿಸಿ, ಸಸಿಗಳನ್ನು ನೆಡಲಾಯಿತು.