‘ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯಧಿ’ ಕಾಧಿರ ್ಯಧಿಕ್ರಮ 11, 12ರಂದು

Contributed bytsdayananda@gmail.com|Vijaya Karnataka

ತಿಪಟೂರಿನ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್‌ ಪ್ರಾಥಮಿಕ ಶಾಲೆಯು 'ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಫೆಬ್ರುವರಿ 11 ಮತ್ತು 12 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳು ನೂರಾರು ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸಲಿದ್ದಾರೆ. ಶಾಸಕ ಕೆ.ಷಡಕ್ಷರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯಕರ ಜೀವನಕ್ಕೆ ಸಾಂಪ್ರದಾಯಿಕ ಆಹಾರದ ಮಹತ್ವವನ್ನು ಮಕ್ಕಳು ತಿಳಿಸಲಿದ್ದಾರೆ.

our future lies in traditional food a program to promote valuable indian cuisine on december 11 12

‘ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯಧಿ’ ಕಾಧಿರ ್ಯಧಿಕ್ರಮ 11, 12ರಂದು

ವಿಕ ಸುಧಿದ್ದಿಧಿಲೋಕ ತಿಪಟೂರು

ನಮ್ಮ ಸಾಂಪ್ರದಾಯಿಕ ಆಹಾರದಿಂದ ವಿಮುಖರಾಗಿ, ಜಂಕ್ ಫುಡ್ ನತ್ತ ವಾಲುತ್ತಿರುವ ಯುವಜನತೆಗೆ ನಮ್ಮ ಭಾರತೀಯ ಅಡುಗೆಯನ್ನು ಪರಿಚಯಿಸುವ ‘ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯಧಿ’ ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯ ಮಕ್ಕಳು ಪ್ರಸ್ತುತಪಡಿಸಲಿದ್ದು, ಶಾಸಕ ಕೆ.ಷಡಕ್ಷರಿ ಕಾರ ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಧಿಕ್ಷಧಿಕ ಸುರೇಶ್ ಎಸ್ .ಆರ್ . ತಿಳಿಸಿದರು.

ನಗರದ ಸರಕಾರಿ ಪ್ರಾಥಮಿಕ ಪಾಢಶಾಲೆಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ಭೂಮಿ ಮಡಿಲಿನಿಂದ ನಮ್ಮಯ ಒಡಲಿಗೆ - ಪ್ರಕೃತಿ, ಆಹಾರ, ಆರೋಗ್ಯ’ದಲ್ಲಿನವೋದ್ಯಮ ವಿಷಯವಾಗಿ ಫೆ.11 ಮತ್ತು ಫೆ.12ರಂದು ನೂರಾರು ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ಪೋಷಕರ ಸಹಕಾರದೊಂದಿಗೆ ಶಾಲೆಯ ಮಕ್ಕಳು ಪರಿಚಯಿಸಲಿದ್ದಾರೆ. ಶಾಲೆಯ ಎಲ್ಲ750ಮಕ್ಕಳೂ ಒಂದಿಲ್ಲೊಂದು ಸಾಂಪ್ರದಾಯಿಕ ಆಹಾರ , ತಿನಿಸುಗಳನ್ನು ತಯಾರಿಸಿ, ಅದರ ಉಪಯೋಗ ಹಾಗೂ ಜೀವನ ಕ್ರಮ ವಿಧಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ. 500ಕ್ಕೂ ಹೆಚ್ಚು ಬಗೆಬಗೆಯ ತಿಂಡಿಗಳನ್ನೊಳಗೊಂಡ ಸಾಂಪ್ರದಾಯಿಕ ಮೃಷ್ಟಾನ್ನ ಧಿಬೋಜನ, ರೊಟ್ಟಿಮನೆ ಸಿದ್ದವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪುರಾತನ ಕಾಲದಿಂದಲೂ ಜೀರ್ಣಾಂಗ ವ್ಯವಸ್ಥೆಗೆ ಪೂರಕ ಆಹಾರ ಕ್ರಮವು ಆಧುನಿಕತೆಯ ಭರಾಟೆಯಲ್ಲಿನಾಲಿಗೆಗೆ ರುಚಿಯಾದ, ಹೊಟ್ಟೆಗೆ ಬೇಡವಾದ ತಿನಿಸುಗಳನ್ನು ರೂಢಿಸಿಕೊಂಡ ಪರಿಣಾಮ ನಮ್ಮ ಗಟ್ಟಿತನ ಕಳೆದುಕೊಳ್ಳುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನ ನಮ್ಮ ಜೀವನ ಸುಲಭ ಮಾಡಿದೆಯೇ ಹೊರತು ನಮ್ಮ ಆರೋಗ್ಯ ಕಾಪಾಡುವಲ್ಲಿವಿಫಲವಾಗುತ್ತಿದೆ. ಆರೋಗ್ಯದಿಂದಿದ್ದರೆ ಜ್ಞಾನದ ಮೌಲ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಅವರ ಸಾಮರ್ಥ್ಯ ಹೆಚ್ಚಿಸಿ ನವೋದ್ಯಮಿಗಳಾಗಲು ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಾಕ್ಸ್ 1:

ಫೆ.11ರಂದು ಶಾಸಕ ಕೆ.ಷಡಕ್ಷರಿ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರನ್ನು ಸಧಿನ್ಮಾಧಿನಿಧಿಸುಧಿವರು. ಮೌಲ್ಯವರ್ಧನೆ ಮಳಿಗೆಯನ್ನು ಉಪವಿಭಾಗಾಧಿಕಾರಿ ಸಪ್ತಶ್ರೀ.ಬಿ.ಕೆ. ಉದ್ಘಾಟಿಸುಧಿವಧಿರು. ಸಾಂಪ್ರದಾಯಿಕ ನೈಸರ್ಗಿಕ ಮಾರ್ಜಕ ಮಳಿಗೆಗೆ ಜಿಲ್ಲಾನೌಕರರ ಸಂಘದ ಅಧ್ಯಕ್ಷ ರಮೇಶ್ ಹೆಚ್ .ಈ. ಚಾಲನೆ ನೀಡಲಿದ್ದಾರೆ. ಯೋಗ ಮಳಿಗೆಯನ್ನು ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಅದೇರೀತಿ ಗಾಣದ ಎಣ್ಣೆ ಮಳಿಗೆ, ಸಾವಯವ ಕೃಷಿ ಮಳಿಗೆ, ಧಿಮೃಷ್ಟಾನ್ನ ಭೋಜನಾಲಯ, ಗೆಡ್ಡೆ-ಗೆಣಸು, ಸೊಪ್ಪು ಮಳಿಗೆಗಳನ್ನು ವಿವಿಧ ಗಣ್ಯರು ಉದ್ಘಾಟಿಸಲಿದ್ದಾರೆ ಎಂದು ಸುರೇಶ್ ಎಸ್ .ಆರ್ , ತಿಳಿಸಿದರು

ಸುದ್ದಿಗೋಷ್ಠಿಯಲ್ಲಿಎಸ್ ಡಿಎಂಸಿ ಉಪಾಧ್ಯಕ್ಷ ದೊಡ್ಡರಂಗಪ್ಪ, ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.

4ತಿಪಟೂರು2:ತಿಪಟೂರಿನ ಸರಕಾರಿ ಪ್ರಾಥಮಿಕ ಪಾಢಶಾಲೆಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮುಖ್ಯ ಶಿಧಿಕ್ಷಧಿಕ ಸುರೇಶ್ ಎಸ್ .ಆರ್ . ಮಾತನಾಡಿದರು.