ವಿಕ ಸುದ್ದಿಲೋಕ ಕಲಬುರಗಿ ಕಲಬುರಗಿ ಮತ್ತು ಆಳಂದ ತಾಪಂ ಕಚೇರಿಯಲ್ಲಿಬುಧವಾರ ದಿನಗೂಲಿ, ಹೊರಗುತ್ತಿಗೆ ಹಾಗೂ ಗೌರವಧನದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಆಯೋಜಿಸಿದ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ವಿಮೆ ನೋಂದಣಿ ಮಹಾ ಮೇಳದಲ್ಲಿ2,112 ಜನ ಸಿಬ್ಬಂದಿ ನೋಂದಣಿ ಮಾಡಿಕೊಂಡರು. ನಗರದಲ್ಲಿನಡೆದ ವಿಮೆ ನೋಂದಣಿ ಮೇಳ ಉದ್ಘಾಟಿಸಿದ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಮಾತನಾಡಿ, ಪ್ರತಿಯೊಬ್ಬರು ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಪಡೆಯಬೇಕೆಂಬುವ ಉದ್ದೇಶದಿಂದ ನೋಂದಣಿ ಮೇಳ ಆಯೋಜಿಸಿದೆ. ವಾರ್ಷಿಕವಾಗಿ ಕೇವಲ 20 ರೂ. ಪಾವತಿಸಿ ಪಿಎಂಎಸ್ ಬಿವೈ ಮತ್ತು 436 ರೂ. ಪಾವತಿಸಿ ಪಿಎಂ ಜೆಜೆಬಿವೈ ಯೋಜನೆಯಡಿ ವಿಮೆ ಮಾಡಿಸಿಕೊಂಡಲ್ಲಿನಿಮ್ಮ ಕುಟುಂಬಕ್ಕೆ ಭದ್ರತೆ ಸಿಗಲಿದೆ. ಇಂತಹ ಒಂದು ಸಾಮಾಜಿಕ ಮತ್ತು ಆರ್ಥಿಕ ಭದ್ರೆತ ನೀಡುವ ವಿಮೆಯನ್ನು ಎಲ್ಲರೂ ಮಾಡಿಸಬೇಕೆಂದು ಕರೆ ನೀಡಿದರು. ಜಿಪಂ, ತಾಪಂ ಹಾಗೂ ಲೀಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿನಡೆದ ನೋಂದಣಿ ಅಭಿಯಾನದಲ್ಲಿಪಿಡಿಓ, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯಿತಿಯ ಸಿಬ್ಬಂದಿಯಾದ ಕರವಸೂಲಿಗಾರರು, ಕ್ಲರ್ಕ-ಕಂ-ಡಾಟಾ ಎಂಟ್ರಿ ಆಪರೇಟರ್ , ಪಂಪ್ ಆಪರೇಟರ, ಗ್ರೂಪ್ ಡಿ’ ಸಿಬ್ಬಂದಿ, ಸ್ವಚ್ಛತಾಗಾರರು, ನೆರೇಗಾ-ಎನ್ ಆರ್ ಎಲ…ಎಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿ, ಸಹಾಯಕರು ನೋಂದಣಿ ಮಾಡಿಕೊಂಡರು. ಆಳಂದ ತಾಪಂ ಕಚೇರಿ ಆವರಣದಲ್ಲಿಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ನೇತೃತ್ವದಲ್ಲಿಜರುಗಿದ ವಿಮೆ ನೋಂದಣಿ ಮಹಾಮೇಳದಲ್ಲಿಸುಮಾರು 612 ಜನ ಸಿಬ್ಬಂದಿ ಪಿಎಂ ಜೆಜೆಬಿವೈ ಮತ್ತು ಪಿಎಂ ಎಸ್ ಬಿವೈ ವಿಮೆ ನೋಂದಣಿ ಮಾಡಿಸಿ ಕೊಂಡರು. ತಾಪಂ ಇಓ ಮಾನಪ್ಪ ಕಟ್ಟಿಮನಿ, ಲೆಕ್ಕಾಧಿಕಾರಿ ಪ್ರಕಾಶ ಜಾಧವ ಇತರರಿದ್ದರು. ಕಾರ್ಯಕ್ರಮದಲ್ಲಿಡಿಎಚ್ ಒ ಡಾ.ಶರಣಬಸಪ್ಪ ಕ್ಯಾತನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಾರಿ ಮುಖ್ಯ ವ್ಯವಸ್ಥಾಪಕ ನಾಗೇಂದ್ರ ಬಾಪೂಗೋಳ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ, ತಾಪಂ ಇ.ಓ ಸೈಯದ್ ಪಟೇಲ…, ಟಿಎಚ್ ಒ ಡಾ.ಮಾರುತಿರಾವ ಕಾಂಬಳೆ ಸೇರಿ ಅನೇಕ ಅಧಿಕಾರಿ-ಸಿಬ್ಬಂದಿಗಳು ಭಾಗಿಯಾಗಿದ್ದರು.

