ಅಧಿತಂತ್ರ ಸ್ಥಿಧಿತಿಧಿಯಲ್ಲಿಬಧಿಗರ್ ಹುಕುಂ ಸಾಧಿಗುಧಿವಧಿಳಿಧಿದಾರ

Contributed byahobalapathy.narayanappa@timesofindia.com|Vijaya Karnataka

ಚಿತ್ರದುರ್ಗ ಜಿಲ್ಲೆಯಲ್ಲಿ ಬಗರ್‌ ಹುಕುಂ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. 1990 ರಿಂದ 2023-23 ರವರೆಗೆ 1,82,967 ಅರ್ಜಿಗಳು ಬಂದಿದ್ದು, 1,46,135 ತಿರಸ್ಕರಿಸಲಾಗಿದೆ. ಇಲಾಖೆ ಸೂಕ್ತ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. 35-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರು ಅತಂತ್ರರಾಗಿದ್ದಾರೆ. ಅರ್ಹರಿಗೆ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ.

rejection of baghar hukam applications the anxiety of landholders awaiting for 35 40 years

ತಿರಸ್ಕಾೃರಕ್ಕೆ ಸೂಕ್ತ ಕಾರಣ ನೀಧಿಡದ ಇಲಾಖೆ | 35 -40 ವರ್ಷಗಳಿಂದ ಸಾಗುವಳಿ | ಜಿಲ್ಲಾದ್ಯಂತ 1990ರಿಂದ 2023-23ರವರೆಗೆ ಒಟ್ಟು 1,82,967 ಅರ್ಜಿ ಸ್ವೀಕಾರ(ಧಿಕಿಧಿಕ್ಕರ್ )

ಅಧಿತಂತ್ರ ಸ್ಥಿಧಿತಿಧಿಯಲ್ಲಿಬಧಿಗರ್ ಹುಕುಂ ಸಾಧಿಗುಧಿವಧಿಳಿಧಿದಾರ

ಎಂ.ಎನ್ .ಅಹೋಬಳಪತಿ ಚಿತ್ರದುರ್ಗ

ಘ್ಕಿಅhಟಚಿa್ಝapaಠಿhy.Na್ಟaya್ಞappaಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಜಿಲ್ಲೆಯಲ್ಲಿಮಂಜೂರಾತಿಗೆ ಬಾಕಿ ಇರುವ ಬಗರ್ ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಜಮೀನು ಮಂಜೂರಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದರಿಂದ ದಶಕಗಳಿಂದ ಸಾಗುವಳಿ ಮಾಡುತ್ತಾ ಬಂದಿರುವ ಸಾಗುವಳಿದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಸರಕಾರ ಮೇಲಿಂದ ಮೇಲೆ ಅರ್ಹ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಮಾಡುವುದಾಗಿ ಹೇಳುತ್ತಿದ್ದರೂ, ದಿನೇ ದಿನೇ ಸಾಗುವಳಿದಾರರನ್ನು ಭೂಮಿ ಹಕ್ಕಿನಿಂದ ವಂಚಿಸುವ, ಮಂಜೂರಾತಿ ತಿರಸ್ಕರಿಸುವ ಬೆಳವಣಿಗೆಗಳು ನಡೆಯುತ್ತಿವೆ. ಬಗರ್ ಹುಕುಂ ಅರ್ಜಿಗಳನ್ನು ಸಕಾಲದಲ್ಲಿವಿಲೇ ಮಾಡಲು ಅಧಿಕಾರಿ ವರ್ಗ ಒಂದು ಕಡೆ, ಜನಪ್ರತಿನಿಧಿಗಳು ಮತ್ತೊಂದು ಕಡೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಗರ್ ಹುಕುಂ ಸಾಗುವಳಿದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಿ ಅಂಕಿ ಅಂಶಗಳ ಪ್ರಕಾರವೇ ಜಿಲ್ಲಾದ್ಯಂತ 1990ರಿಂದ 2023-23ರವರೆಗೆ ಒಟ್ಟು 1,82,967 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿಇದುವರೆಗೆ 29,452 ಅರ್ಜಿ ಸಕ್ರಮಗೊಳಿಸಲಾಗಿದೆ. 7380 ಅರ್ಜಿ ಬಾಕಿ ಇದ್ದು, 1,46,135 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನಮೂನೆ 50, 1990-91ರಲ್ಲಿಸಲ್ಲಿಕೆಯಾದ 52,222 ಅರ್ಜಿಗಳಲ್ಲಿ19,832 ಅರ್ಜಿಗಳನ್ನು ಮಾತ್ರ ಸಕ್ರಮಗೊಳಿಸಲಾಗಿದ್ದು, 32,390 ಅರ್ಜಿ ತಿರಸ್ಕರಿಸಲಾಗಿದೆ.

ಅರ್ಜಿಗಳ ತಿರಸ್ಕೃತಗೊಳಿಸಿರುವುದಕ್ಕೆ ಸೂಕ್ತ ಕಾರಣಗಳನ್ನು ಇಲಾಖೆ ನೀಡುತ್ತಿಲ್ಲ. ಸ್ಥಳ ಪರಾಮರ್ಶೆ ಮಾಡದೇ ಏಕಪಕ್ಷೀಯವಾಗಿ ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮೊದಲ ಹಂತದಲ್ಲಿಸಲ್ಲಿಕೆಯಾದ ಈ ಅರ್ಜಿಗಳಲ್ಲಿಶೇ.90ರಷ್ಟು ಅರ್ಜಿಗಳು ಮಂಜೂರಾತಿಗೆ ಎಲ್ಲಅರ್ಹತೆ ಹೊಂದಿವೆ. ಸರಕಾರ ಮರುಪರಿಶೀಲಿಸದಿದ್ದಲ್ಲಿ35 -40 ವರ್ಷಗಳಿಂದ ಸಾಗುವಳಿ ಮಾಡುತ್ತಾ, ಈಗಲೂ ಸ್ವಾಧೀನದಲ್ಲಿರುವ ಸಾಗುವಳಿದಾರರು ಬೀದಿಗೆ ಬೀಳಬೇಕಾಗುತ್ತದೆ ಎಂದು ಬಗರ್ ಹುಕುಂ ಹೋರಾಟಗಾರರು ಹೇಳುತ್ತಿದ್ದಾರೆ.

ಎಪ್ಪತ್ತರ ದಶಕದಿಂದಲೂ ಸಾಗುವಳಿ ಮಾಡುತ್ತಾ ಬಂದಿರುವ ಸಾಗುವಳಿದಾರರು ಅರ್ಜಿ ಸಲ್ಲಿಸಿರುವುದರ ಜತೆಗೆ 1985-86ನೇ ಸಾಲಿನಲ್ಲಿಸರಕಾರ ವಿಧಿಸಿರುವ ಟಿ.ಟಿ. ದಂಡವನ್ನೂ ಸಹಾ ಪಾವತಿಸಿ, ಅಧಿಕೃತ ರಸೀದಿಗಳನ್ನು ಹೊಂದಿದ್ದಾರೆ. ಸ್ಥಳ ತನಿಖೆ ಮಾಡಿದಲ್ಲಿಇಂತಹ ಅರ್ಜಿಗಳನ್ನು ಮರು ಪರಿಶೀಲಿಸಿ, ವಿಲೇ ಮಾಡಬೇಕು ಎಂಬುದು ಸಾಗುವಳಿದಾರರು ಆಗ್ರಹ ಪಡಿಸುತ್ತಿದ್ದಾರೆ.

ನಮೂನೆ 53ರಲ್ಲಿಸಲ್ಲಿಕೆಯಾಗಿರುವ 60,742 ಅರ್ಜಿಗಳಲ್ಲಿಕೇವಲ 9620 ಅರ್ಜಿಗಳನ್ನು ಸಕ್ರಮಗೊಳಿಸಿ, 43,742 ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗಿದೆ. ಇವುಗಳಲ್ಲಿಕೇವಲ 7380 ಅರ್ಜಿಗಳನ್ನು ಮಾತ್ರ ಪರಿಶೀಲನೆಗೆ ಅರ್ಹ ಎಂದು ಸರಕಾರಿ ಅಂಕಿ ಅಂಶಗಳು ಹೇಳುತ್ತಿವೆ. ಇವುಗಳನ್ನು ಗೋಮಾಳದ ಕೊರತೆ, ದುರುದ್ದೇಶಪೂರಿತ ಸ್ಥಳೀಯ ವಿರೋಧಗಳ ಕಾರಣಕ್ಕೆ ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾಗುವಳಿದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ನಮೂನೆ 57 ರಲ್ಲಿಸಲ್ಲಿಸಿರುವ 70 ಸಾವಿರ ಅರ್ಜಿಗಳನ್ನು ಸ್ಥಳ ತನಿಖೆ ನಡೆಸದೇ, ಯಾವುದೇ ಸಕಾರಣ ನೀಡದೇ ತಿರಸ್ಕರಿಸಲಾಗಿದೆ. ನಮೂನೆ 50,53ರಲ್ಲಿಮಂಜೂರಾತಿ ಪ್ರಕ್ರಿಯೆಯಲ್ಲಿಅರ್ಜಿ ತಿರಸ್ಕರಿಸಲ್ಪಟ್ಟಲ್ಲಿಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಮೇಲ್ಮನವಿ ಸಲ್ಲಿಸಲು ಅವಕಾಶ ಇತ್ತು. ನಮೂನೆ 57ರಲ್ಲಿತಿರಸ್ಕರಿಸಿರುವ ಅರ್ಜಿಗಳ ಮೇಲ್ಮನವಿ ಸಲ್ಲಿಸಲು ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಬೇಕು. ಇದು ಬಡ ಸಾಗುವಳಿದಾರರಿಗೆ ಸಾಧ್ಯವೇ? ಎಂದು ಪ್ರಶ್ನಿಸುತ್ತಿದ್ದಾರೆ. ಉತ್ತರಿಸುವವರು ಯಾರು?.

**

ಬಾಕ್ಸ್ //

ಕಂದಾಯ ಇಲಾಖೆ ಗುರುತಿಸಲಿ

ನಮೂನೆ 50ರಲ್ಲಿತಿರಸ್ಕರಿಸಲ್ಪಟ್ಟಿರುವ 32,390 ಅರ್ಜಿದಾರರು ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿಮಳೆಯಾಶ್ರಿತ ಕೃಷಿ ಮತ್ತು ಕೊಳವೆ ಬಾವಿಗಳ ಮೂಲಕ ನೀರಾವರಿ ಸಹಾ ಮಾಡಿಕೊಂಡಿದ್ದಾರೆ. ಅಡಕೆ, ತೆಂಗು, ಅಲ್ಪಾವಧಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುತೇಕರು ಸಾಗುವಳಿ ಜಮೀನುಗಳಲ್ಲಿಮನೆಗಳನ್ನು ಸಹಾ ನಿರ್ಮಿಸಿ, ವಾಸಿಸುತ್ತಿದ್ದಾರೆ. ಇಂತಹ ಅರ್ಹ ಪ್ರಕರಣಗಳನ್ನಾದರೂ ಕಂದಾಯ ಇಲಾಖೆ ಗುರುತಿಸಬೇಕು ಎಂಬುದು ಸಾಗುವಳಿದಾರರ ಅಳಲು.

**

ಬಾಕ್ಸ್ /

ನಿಧಿಯಮ ಇಧಿದ್ದರೂ ಸಭೆ ನಡೆಸುತ್ತಿಲ್ಲ

ನಮೂನೆ 53 ರಲ್ಲಿಅರ್ಜಿಗಳನ್ನು ಪರಿಶೀಲಿಸುವಲ್ಲಿಜನಪ್ರತಿನಿಧಿಗಳು, ಅಧಿಕಾರಿಗಳ ವಿಳಂಬ ಧೋರಣೆ, ನಿರ್ಲಕ್ಷ್ಯ ಇದೆ ಎಂಬುದು ಸಾಗುವಳಿದಾರರ ದೂರು. ವಾರಕ್ಕೊಮ್ಮೆ ಬಗರ್ ಹುಕುಂ ಸಭೆ ನಡೆಸಬೇಕೆನ್ನುವ ನಿಯಮ ಇದ್ದರೂ, ಸಭೆಗಳನ್ನು ನಡೆಸುತ್ತಿಲ್ಲ. ನೆಪ ಮಾತ್ರ ಸಭೆ ನಡೆಸಿದರೂ ಶೂನ್ಯ ಪ್ರಗತಿ, ಸಾಗುವಳಿ ಚೀಟಿ ವಿತರಣೆಗೆ ಕ್ರಮವಹಿಸಿಲ್ಲ. ಶಾಸಕರು ನಿಯಮಿತವಾಗಿ ಬಗರ್ ಹುಕುಂ ಸಮಿತಿಗಳ ಸಭೆ ನಡೆಸುತ್ತಿಲ್ಲ. ಶಾಸಕರಿಗೆ ಬಿಡುವು ಇಲ್ಲದಿದ್ದಲ್ಲಿತಹಸೀಲ್ದಾರರೇ ಸಭೆ ನಡೆಸುವ ಅವಕಾಶ ಇದ್ದರೂ ಸಭೆಗಳನ್ನು ನಡೆಸದೇ ನಿರ್ಲಕ್ಷಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಸಾಗುವಳಿದಾರರು ಏನು ಮಾಡಬೇಕು? ಎಂಬುದು ಸಾಗುವಳಿದಾರರ ಪ್ರಶ್ನೆ.

**

ಕೋಟ್ /

ಬಗರ್ ಹುಕುಂ ಸಾಗುವಳಿ ಕೋರಿ ಸಲ್ಲಿಸಿರುವ ಅರ್ಜಿಗಳು ಸಕ್ರಮವಾಗಿದ್ದರೂ ಸಾಗುವಳಿದಾರರು ಮಂಜೂರಾತಿಗೆ ಅರ್ಹರಿರಬೇಕು. ಅರ್ಜಿ ಸಕ್ರಮವಾಗಿದ್ದೂ, ಸಾಗುವಳಿ ಮಾಡುತ್ತಿದ್ದರೂ ಭೂಮಿ ಅರಣ್ಯ ಇಲಾಖೆ ಸೇರಿರಬಹುದು. ಗೋಮಾಳದ ಕೊರತೆ ಇರಬಹುದು. ಅಂತಹ ಸಂದರ್ಭದಲ್ಲಿನಿಯಮಾನುಸಾರ ಮಂಜೂರು ಮಾಡಲು ಬರುವುದಿಲ್ಲ. ಆದರೂ, ಅರ್ಹ ಸಾಗುವಳಿದಾರರಿಗೆ ಭೂ ಮಂಜೂರಾತಿಗೆ ಇರುವ ಸಾಧ್ಯತೆಗಳನ್ನು ಜಿಲ್ಲಾಡಳಿತ ಪರಿಶೀಲಿಸುತ್ತಿದೆ.

- ಟಿ.ವೆಂಕಟೇಶ್ , ಜಿಲ್ಲಾಧಿಕಾರಿ

**

ಕೋಚ್ /

ಶಾಸಕರು ನಿಯಮಿತವಾಗಿ ಬಗರ್ ಹುಕುಂ ಸಭೆಗಳನ್ನು ನಡೆಸಿ, ವಾಸ್ತವಾಂಶ ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ವಿಳಂಬವಾಗುವುದಾದರೆ, ಕನಿಷ್ಟ ಸಾಗುವಳಿದಾರರ ಭೂಮಿ ಚೆಕ್ ಬಂಧಿ ಗುರುತಿಸಿ, ಕಂದಾಯ ಇಲಾಖೆ ಜತೆ ಸಂಘರ್ಷಕ್ಕೆ ಅವಕಾಶವಾಗದಂತೆ ದಾಖಲೆ ನೀಡಬೇಕು.

- ಪ್ರಜಾಶಕ್ತಿ ಬೋರಯ್ಯ, ಭೂ ಸಾಗುವಳಿ ಹೋರಾಟಗಾರರು.

**