ಸುದ್ದಿಚೂರು

Contributed bytvlbdr@gmail.com|Vijaya Karnataka

ಬೀದರ್ ಜಿಲ್ಲೆಯಲ್ಲಿ 2025-26ರ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ. ಸಮಸ್ಯೆ ಎದುರಾದರೆ ತಹಸೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಗತ್ಯ ಕ್ರಮ ಕೈಗೊಳ್ಳಲಾಗುವುದು.

drinking water issues in bidar contact information for authorities

ಚಿತ್ರ:ಶಿಲ್ಪಾ ಶರ್ಮಾ, ಡಿಸಿ ಬೀದರ್ , ಚಿತ್ರ ಬಳಸಿ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳಿಗೆ ಸಂಪರ್ಕಿಸಿ ವಿಕ ಸುದ್ದಿಲೋಕ ಬೀದರ್ 2025-26ನೇ ಸಾಲಿನ ಮುಂಬರುವ ಬೇಸಿಗೆಯಲ್ಲಿಬೀದರ್ ಜಿಲ್ಲೆಯ ನಗರ ಮತ್ತ ಗ್ರಾಮೀಣ ಪ್ರದೇಶಗಳಲ್ಲಿಕುಡಿಯುವ ನೀರಿನ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳು ನೀಡಲಾಗಿದೆ. ಅದಾಗ್ಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದಲ್ಲಿಸಾರ್ವಜನಿಕರು ನೇರವಾಗಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಗ್ರಾಮೀಣ ಕುಡಿಯುವ ನಿರು ಮತ್ತು ನೈರ್ಮಲ್ಯ ಅಧಿಕಾರಿಗಳ ಗಮನಕ್ಕೆ ದೂರವಾಣಿ ಅಥವಾ ನೇರವಾಗಿ ಲಿಖಿತ ರೂಪದಲ್ಲಿಗಮನಕ್ಕೆ ತಂದಲ್ಲಿಕುಡಿಯು ನೀರು ಸರಬರಾಜು ಮಾಡಲು ಅಗತ್ಯ ಕ್ರಮವನ್ನು ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ: ಔರಾದ್ ತಾಲೂಕಿನ ತಹಸೀಲ್ದಾರ (7795516277), ತಾಪಂ ಕಾರ್ಯನಿರ್ವಾಹಕ ಅಧಿಕಾರಿ (9480856100), ಗ್ರಾ.ಕು.ನೀ. ಮತ್ತು ನೈ.ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (8618546863). ಕಮಲನಗರ ತಹಸೀಲ್ದಾರ (9916729555), ತಾಪಂ ಇಒ (9886938068), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (8618546863). ಬೀದರ್ ತಹಸೀಲ್ದಾರ (9972743266), ತಾಪಂ ಇಒ (9448654111), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (9448890795). ಭಾಲ್ಕಿ ತಾಲೂಕಿನ ತಹಸೀಲ್ದಾರ (9880211640), ತಾಪಂ ಇಒ (9739085273), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (95941685900). ಬಸವಕಲ್ಯಾಣ ತಾಲೂಕಿನ ತಹಸೀಲ್ದಾರ (9739463725), ತಾಪಂ ಇಒ (9740692836), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (9686157144). ಹುಲಸೂರ ತಹಸೀಲ್ದಾರ (9108181411), ತಾಪಂ ಇಒ (9902167846), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (9686157144). ಹುಮನಾಬಾದ್ ತಹಸೀಲ್ದಾರ (8884122484), ತಾಪಂ ಇಒ (9611040407), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (8073994986). ಚಿಟ್ಟಗುಪ್ಪ ತಹಸೀಲ್ದಾರ (9972787919), ತಾಪಂ ಇಒ (8050018901), ಗ್ರಾ.ಕು.ನೀ. ಮತ್ತು ನೈ.ವಿ.ಸ.ಕಾ. ಅಭಿಯಂತರರು (8073994986). ಧಿಧಿಧಿಧಿಧಿಧಿಧಿ ಧಿಧಿ