13 ಎಎಲ್ಡಿ 3 ಆಳಂದ ಪಟ್ಟಣದ ಮಹಾಂತೇಶ್ವರ ಮಠದಲ್ಲಿಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಪಾದಯಾತ್ರಾರ್ಥಿ ಕೇದಾರಲಿಂಗ ಕುಂಬಾರ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
***
ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾದ 1500 ಕಿಮೀ ಗೋರಕ್ಷಣೆ ಪಾದಯಾತ್ರೆ | ಶ್ರೀರಾಮನ ದರ್ಶನಕ್ಕೆ 55 ಕೆಜಿ ಜೋಳ ಹೊತ್ತಕೊಂಡು ನಡೆದ ಯುವಕ
ಆಳಂದದಲ್ಲಿಕೇದಾರಲಿಂಗಗೆ ಸನ್ಮಾನ
ವಿಕ ಸುದ್ದಿಲೋಕ ಆಳಂದ
ತಲೆಯ ಮೇಲೆ 55 ಕೆಜಿ ಭಾರದ ಜೋಳದ ಚೀಲ ಹೊತ್ತುಕೊಂಡು ದಿನಕ್ಕೆ 35 ಕಿಮೀ ನಡೆದು 1500 ಕಿಮೀ ದೂರದ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಪಾದಯಾತ್ರೆಯ ಮೂಲಕ ಹೊರಟ ವಿಜಯಪೂರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ 26 ವರ್ಷದ ಯುವಕ ಕೇದಾರಲಿಂಗ ಧರೆಪ್ಪ ಕುಂಬಾರ ಅವರನ್ನು ಪಟ್ಟಣದ ಮಹಾಮತೇಶ್ವರ ಮಠದಲ್ಲಿತಾಲೂಕು ಕುಂಬಾರ ಸಮಾಜದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈತನ ಜತೆಗೆ ವಿವೇಕಾನಂದ ಕುಂಬಾರ, ಅರವಿಂದ ಕರದಾಳ, ಮುಸ್ಲಿಂ ಸಮುದಾಯದ ನೂರ್ ಸಾಬ ನದಾಫ್ ಪಾದಯಾತ್ರೆಯ ಹೆಜ್ಜೆಗೆ ಸಾಥ್ ನೀಡುತ್ತಿದ್ದಾರೆ.
ಯಾತ್ರಾರ್ಥಿ ಕೇದಾರಲಿಂಗ ಕುಂಬಾರ ಮಾತನಾಡಿ, ಅಯೋಧ್ಯೆಯಲ್ಲಿರಾಮ ಮಂದಿರ ನಿರ್ಮಾಣ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿಹಾಗೂ ಮುಂದಿನ ದಿನಗಳಲ್ಲಿಗೋರಕ್ಷಣೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಈ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.
ವಕೀಲ್ ಮಹಾದೇವ ಎಸ್ .ಹತ್ತಿ, ಪತ್ರಕರ್ತ ಮಹಾದೇವ ವಡಗಾಂವ, ಕುಂಬಾರ ಸಮಾಜದ ಅಧ್ಯಕ್ಷ ಶರಣು ಟಿ. ಕುಂಬಾರ, ಬಸವಸೇನಾ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಎಂ.ಪಾಟೀಲ್ , ಪ್ರಮುಖರಾದ ಜಗನ್ನಾಥ ಕುಂಬಾರ, ಡಾ. ಅವಿನಾಶ ದೇವನೂರ, ಮಹೇಶ ಸಾಕ್ರೆ, ಶರಣು ವಣದೆ, ಶರಣು ಬಿ.ಕುಂಬಾರ, ಮಲ್ಲಿನಾಥ ಕುಂಬಾರ, ವಿಜಯಕುಮಾರ ಕುಂಬಾರ ಭಾಗವಹಿಸಿ ಪಾದಯಾತ್ರಾರ್ಥಿಗಳಿಗೆ ಸನ್ಮಾನಿಸಿ ಶುಭ ಕೋರಿದರು.

