ವೀಲಿಂಗ್ ಪುಂಡರ ಹಾವಳಿಗೆ ವಾಹನ ಸವಾರರು ಹೈರಾಣು
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ: ತಾಲೂಕಿನ ಮೂಲಕ ಹಾದುಹೋಗಿರುವ ದಾಬಸ್ ಪೇಟೆ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿವೀಲಿಂಗ್ ಮಾಡುವ ಪುಂಡರ ಹಾವಳಿ ದಿನೆ,ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದೆ. ಬೈಕ್ ಗಳ ನಂಬರ್ ಪ್ಲೇಟ್ ಕಳಚಿ ರಸ್ತೆಗಿಳಿಯುವ ಪುಂಡರು, ಗುಂಪು ಗುಂಪಾಗಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿವೀಲಿಂಗ್ ಮಾಡುತ್ತಾರೆ. ಈ ಅಕ್ರಮ ಚಟುವಟಿಕೆಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾಗಿದ್ದಾರೆ.
ತಾಲೂಕಿನ ನಾಗದೇನಹಳ್ಳಿ ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿವೀಲಿಂಗ್ ಮಾಡುವ ಘಟನೆಗಳು ಹೆಚ್ಚಾಗಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈ ಪ್ರದೇಶದಲ್ಲಿಯುವಕರಿಂದ ಅಶಿಸ್ತಿನ ವರ್ತನೆ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತೀಚೆಗೆ 11 ಮಂದಿ ಯುವಕರು ಗುಂಪಾಗಿ ದೇವನಹಳ್ಳಿ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿವೀಲಿಂಗ್ ಮಾಡಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿನಡೆದಿದೆ. ವೀಲಿಂಗ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಹೆಚ್ಚಿನ ನಿಗಾವಹಿಸಿ ತನಿಖೆ ನಡೆಸುತ್ತಿದ್ದಾರೆ.
------
ಫೋಟೊ:1401ವಿಕೆ4: ದೊಡ್ಡಬಳ್ಳಾಪುರದ ನಾಗದೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿಪುಂಡರು ಬೈಕ್ ವೀಲಿಂಗ್ ಮಾಡುತ್ತಿರುವುದು.

