ವಿವೇಕರ ಸಂದೇಶ ಯುವ ಜನತೆಗೆ ಸ್ಫೂರ್ತಿ
----
ವಿಕ ಸುದ್ದಿಲೋಕ ಹಿರಿಯೂರು
ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣದ ಪತ್ರದವರೆಗೂ ಪ್ರತಿಯೊಬ್ಬ ನಾಗರೀಕರು ಕಾನೂನು ಅರಿವು ಪಡೆದುಕೊಳ್ಳಬೇಕು. ಸಮಾಜದಲ್ಲಿಉತ್ತಮ ಜೀವನ ನಡೆಸಲು ಕಾನೂನು ಅತ್ಯವಶ್ಯಕ ಎಂದು ತಾಲೂಕು ವಕೀಲ ಸಂಘದ ಅಧ್ಯಕ್ಷ ಎಂ.ಆರ್ . ರಂಗಸ್ವಾಮಿ ಹೇಳಿದರು.
ತಾಲೂಕಿನ ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ನೇತೃತ್ವದಲ್ಲಿಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಜೀವನದ ಕುರಿತ ಗ್ರಂಥ, ಉಪನಿಷತ್ತು ತಿಳಿದ ವಿವೇಕಾನಂದರು ದೇಶ-ವಿದೇಶಗಳನ್ನು ಸುತ್ತಿ ಸರ್ವಧರ್ಮ ಸಮ್ಮೇಳನದಲ್ಲಿಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡಿದರು. ರಾಮಕೃಷ್ಣ ಮಿಷನರಿ, ವಿವೇಕವಾಣಿ ಎಂದಿಗೂ ಯುವ ಜನತೆಗೆ ಸ್ಪೂರ್ತಿಯಾಗಿದೆ. ಆತ್ಮವಿಶ್ವಾಸ, ಶಕ್ತಿಶಾಲಿ ಉಕ್ಕಿನ ಮಾಂಸ ಖಂಡಗಳು ಯುವಕರಲ್ಲಿಇದ್ದಾಗ ಮಾತ್ರ ದೇಶವನ್ನು ಕಟ್ಟುವ ಕಾರ್ಯ ನಡೆಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಶ್ರೀನಿವಾಸಮೂರ್ತಿ, ಕಾನೂನು ಸಲಹೆಗಾರ ವಕೀಲ ಮಹಾಲಿಂಗಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿಸಹಾಯಕ ಕಾನೂನು ನೆರವು ಅಭಿಕ್ಷಕಿ ಸೋಮ, ವಕೀಲರ ಸಂಘದ ಪ್ರ.ಕಾರ್ಯದರ್ಶಿ ಪ್ರಕಾಶ್ , ಉಪನ್ಯಾಸಕರಾದ ವೇಣುಕುಮಾರ್ , ಹರ್ಷ ಮಾತನಾಡಿದರು. ಸಂಸ್ಥೆಯ ಅಧೀಕ್ಷಕ ಪ್ರಶಾಂತ್ , ಉಪನ್ಯಾಸಕರಾದ ನರಸಿಂಹಮೂರ್ತಿ, ವರದೇಗೌಡ, ಪ್ರವೀಣ್ , ಸುಗುಣ, ನೇತ್ರ, ವಿದ್ಯಾ, ಅನುಷ ಇದ್ದರು.
12 ಪಿಎಚ್ ವೈಆರ್ 1
ಹಿರಿಯೂರು ತಾಲೂಕಿನ ಭೀಮನಬಂಡೆ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ವಕೀಲ ಸಂಘದ ಅಧ್ಯಕ್ಷ ಎಂ.ಆರ್ .ರಂಗಸ್ವಾಮಿ ಉದ್ಘಾಟಿಸಿದರು.

