‘ಆರೋಗ್ಯ ಕಾಳಜಿ ವಹಿಸಿ’
ವಿಕ ಸುದ್ದಿಲೋಕ ಹನುಮಸಾಗರ
‘‘ವೃದ್ಧರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು,’’ ಎಂದು ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ವಿಜಯಲಕ್ಷಿತ್ರ್ಮ ಹೇಳಿದರು.
ಸ್ಥಳೀಯ ಕರಿಸಿದ್ದೇಶ್ವರ ಮಠದಲ್ಲಿಗ್ರಾಪಂ, ಆರೋಗ್ಯ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧ ವಿತರಣೆ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಇಂದು ಅಸಂಕ್ರಾಮಿಕ ರೋಗಗಳು ಅನೇಕರನ್ನು ಕಾಡುತ್ತಿದೆ. ಆರೋಗ್ಯವಂತ ಜೀವನ ಶೈಲಿಗಾಗಿ ನಿತ್ಯ ಯೋಗಸಾನ, ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು. ಹಿರಿಯರು ಕಾಲ ಕಾಲಕ್ಕೆ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಕ್ಕರೆ, ಮೈದಾ, ಬಿಳಿ ಉಪ್ಪು, ಪಾಲಿಶ್ ಅಕ್ಕಿಯಿಂದ ದೂರವಿರಬೇಕು,’’ ಎಂದು ಸಲಹೆ ನೀಡಿದರು.
ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿದರು. ಡಾ.ದೀಪಿಕಾ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಸುಧಾಕರ, ಚನ್ನಬಸಪ್ಪ ಹನುಮನಾಳ, ಎ.ಎಸ್ .ಅಂತರಗಂಗಿ, ಬೀರಪ್ಪ ವಡಗಲಿ, ಸಿದ್ದಲಿಂಗರಡ್ಡಿ, ಗ್ರಂಥಪಾಲಕಿ ದುರ್ಗಮ್ಮ ಹಿರೇಮನಿ, ಮಹಾಂತಯ್ಯ ಕೋಮಾರಿ, ಬಸವಂತಪ್ಪ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಫೋಟೋ ಕ್ಯಾಪ್ಷನ್ : ಕೆಪಿಎಲ್ 13 ಫೋಟೊ2
ಹನುಮಸಾಗರ ಗ್ರಾಮದಲ್ಲಿಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಮಂಗಳವಾರ ಗಣ್ಯರು ಉದ್ಘಾಟಿಸಿದರು.

