ಶುದ್ಧ ಜಲ ಅಭಿಯಾನ
ಕೊಪ್ಪಳ: ಯಲಬುರ್ಗಾ ತಾಲೂಕಿನ ಬಳಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ಜಲ ಅಭಿಯಾನ ಜಾಥಾ ಮತ್ತು ಶಾಲಾ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶುದ್ಧಗಂಗಾ ಮೇಲ್ವಿಚಾರಕ ಶಿವಾನಂದ ಅಕ್ಕಿ ಮಾತನಾಡಿ, ‘‘ಶುದ್ಧ ನೀರು ಸೇವನೆಯಿಂದ ನಮ್ಮ ಆರೋಗ್ಯ ಬಲವರ್ಧನೆ ಆಗುತ್ತದೆ. ನಾವು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಕುಟುಂಬದ ರಕ್ಷಣೆ ಮಾಡಬಹುದು ಜತೆಗೆ ನಮ್ಮ ಕುಟುಂಬ ಆರ್ಥಿಕ ಸಬಲೀಕರಣ ಆಗುತ್ತದೆ. ಕಲುಷಿತ ನೀರು ನಮಗೆ ಅನೇಕ ರೋಗ ರುಜಿನಗಳು ತರುತ್ತದೆ. ಇದರಿಂದಾಗಿ ನಮ್ಮ ಕುಟುಂಬಕ್ಕೆ ಆರ್ಥಿಕ ಹೊರೆ ಬೀಳುತ್ತದೆ. ನಾವು ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು,’’ ಎಂದು ತಿಳಿಸಿದರು. ಪ್ರಮುಖರಾದ ದುರಗಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಫೋಟೋ
13ಕೆಪಿಎಲ್ ಫೋಟೋ01
ಯಲಬುರ್ಗಾ ತಾಲೂಕಿನ ಬಳಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿಶುದ್ಧ ಜಲ ಅಭಿಯಾನ ಜಾಥಾ ಮತ್ತು ಶಾಲಾ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

