ವಿಜ್ಞಾನ ವಸ್ತು ಪ್ರದರ್ಶನ
ವೈಜ್ಞಾನಿಕ ಪರಿಕಲ್ಪನೆ ಮೂಡಿಸಿ
ವಿಕ ಸುದ್ದಿಲೋಕ ಬಬಲೇಶ್ವರ
‘‘ಜಾಗತಿಕ ಮಟ್ಟ ಅತಿ ವೇಗವಾಗಿ ಬೆಳೆಯುತ್ತಿದೆ. ಗ್ರಾಮೀಣ ಭಾಗದ ಮಕ್ಕಳೇ ಇವತ್ತು ಹೆಚ್ಚಿನ ಕ್ಷೇತ್ರಗಳಲ್ಲಿಸಾಧನೆ ಮಾಡಿದ್ದಾರೆ. ಮಕ್ಕಳಿಗೆ ವೈಜ್ಞಾನಿಕ ಪರಿಕಲ್ಪನೆ ಮೂಡಿಸಬೇಕಾಗಿದೆ,’’ ಎಂದು ಎಸ್ ಡಿಎಂಸಿ ಅಧ್ಯಕ್ಷ ರಾಮು ಜಾಧವ್ ಹೇಳಿದರು.
ತಾಲೂಕಿನ ಕಾಖಂಡಕಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ2025-26 ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಯೋಜನೆಯಡಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಶಿಕ್ಷಕಿ ಭಾರತಿ ಹಾವರಗಿ ಮಾತನಾಡಿ,‘‘ಇಂತಹ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳು ಹೊಸ, ಹೊಸ ವಸ್ತುಗಳನ್ನು ಆವಿಷ್ಕಾರ ಮಾಡಲು ಸಹಾಯವಾಗುತ್ತದೆ,’’ ಎಂದರು.
ಎಸ್ .ಬಿ.ಪಟ್ಟಣಶೆಟ್ಟಿ, ಆರ್ .ವೈ.ಕುಲಕರ್ಣಿ, ಆರ್ .ಎಂ.ಕೊಟ್ಯಾಳ, ಆರ್ .ಆರ್ .ರೋಜಿಂದಾರ, ಎಸ್ .ಜಿ.ವಿಧಾತೆ, ಎನ್ . ಸಿ.ಕಲಾದಗಿ, ಎಸ್ .ಎಂ.ಜುಂಜರವಾಡ, ಎ.ಎ.ಜಮಾದಾರ, ಎಲ್ .ಎಮ್ .ಬಿರಾದಾರ, ಎಸ್ .ಎಸ್ .ಬಿರಾದಾರ, ಎಸ್ .ಜಿ.ಭಾವಿಕಟ್ಟಿ ಇದ್ದರು.
ಪೋಟೊ
ಕಾಖಂಡಕಿ ಗ್ರಾಮದ ಪ್ರೌಢಶಾಲೆಯಲ್ಲಿನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಎಸ್ ಡಿಎಂಸಿ ಅಧ್ಯಕ್ಷ ರಾಮು ಜಾಧವ್ ವೀಕ್ಷಿಸಿದರು.

