ಮೇಕಪ್ ನಲ್ಲಿಹೈಲೈಟರ್ ನ ಮಹತ್ವ
ವಿದ್ಯಾ ನವೀನ್
ಮೇಕಪ್ ಮಾಡಿದ ನಂತರ ತ್ವಚೆ ಸುಂದರವಾಗಿ ಹಾಗೂ ಹೊಳೆಯುವಂತೆ ಕಾಣಬೇಕು ಅಂದರೆ ಹೈಲೈಟರ್ ಬಳಕೆ ಮುಖ್ಯ.
ಹೈಲೈಟರ್ ಬಳಸುವುದರಿಂದ ಸಿಗುವ ಲಾಭಗಳೆಂದರೆ ಚರ್ಮಕ್ಕೆ ನೈಸರ್ಗಿಕ ಬೆಳಕು ಮತ್ತು ಗ್ಲೋ ಕೊಡುತ್ತದೆ. ಮುಖದ ಲಕ್ಷಣಗಳನ್ನು ಹೈಲೈಟ್ ಮಾಡುತ್ತದೆ.Üಲ್ಲದ ಎಲುಬು, ಭ್ರೂ ಎಲುಬು, ತುಟಿಗಳ ಮಧ್ಯಭಾಗವನ್ನು ಚೆನ್ನಾಗಿ ತೋರಿಸುತ್ತದೆ. ಮುಖದ ಭಾಗಗಳು ಸಮಾನವಾಗಿ ಕಾಣಲು ಸಹಾಯ ಮಾಡುತ್ತದೆ.
ಕ್ರೀಮ್ ಮತ್ತು ಪೌಡರ್ ರೂಪದಲ್ಲಿಲಭ್ಯ ಇರುವ ಇದನ್ನು ನಿಮ್ಮ ಚರ್ಮಕ್ಕೆ ತಕ್ಕದನ್ನು ಆಯ್ಕೆ ಮಾಡಬಹುದು.
ಬಳಸುವ ವಿಧಾನ ಕೂಡ ಮುಖ್ಯ. ಇದಕ್ಕಾಗಿ ಗಲ್ಲದ ಎಲುಬು, ಮೂಗು ಮೇಲ್ಭಾಗ ಮತ್ತು ತುಟಿಗಳ ಮಧ್ಯಭಾಗಕ್ಕೆ ಹಚ್ಚಿ. ಚೆನ್ನಾಗಿ ಬ್ಲೆಂಡ್ ಮಾಡಿ ನೈಸರ್ಗಿಕ ಲುಕ್ ತಂದುಕೊಳ್ಳಿ. ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಹೈಲೈಟರ್ ಆಯ್ಕೆ ಮಾಡಿ. ಹೈಲೈಟರ್ ಬಳಸಿದರೆ ನಿಮ್ಮ ಮೇಕಪ್ ಇನ್ನಷ್ಟು ಸುಂದರವಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ.

