13 ಎಎಲ್ಡಿ 2 ಆಳಂದ ತಾಲೂಕಿನ ನರೋಣಾ ಗ್ರಾಮದ ಸಂಪಾದನಾ ಮಠದ ಆವರಣದಲ್ಲಿಹಮ್ಮಿಕೊಂಡ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಡಾ. ಗುರುಮಹಾಂತ ಸ್ವಾಮೀಜಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಾಬುರಾವ ವಾಲಿ, ರಜನಿಕಾಂತ ಭೈರಗೊಂಡ, ಶಂಕರ ಗಡ್ಡದ ಇತರರು ಇದ್ದರು.
**
ನರೋಣಾ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಆಚರಣೆ
ವಿವೇಕಾನಂದರು ಯುವಕರಿಗೆ ಸ್ಫೂರ್ತಿ
ವಿಕ ಸುದ್ದಿಲೋಕ ಆಳಂದ
ವಿವೇಕಾನಂದರ ಆದರ್ಶ ಬೋಧನೆಗಳು ಯುವ ಸಮೂಹಕ್ಕೆ ಸದಾ ಸ್ಪೂರ್ತಿದಾಯಕವಾಗಿವೆ ಎಂದು ನರೋಣಾ ಮಹಾಂತೇಶ್ವರ ಮಠದ ಪೀಠಾಧಿಪತಿ ಡಾ. ಗುರುಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ನರೋಣಾ ಗ್ರಾಮದ ಸಂಪಾದನಾ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜ ಹಾಗೂ ಮಹಾಂತೇಶ್ವರ ಪುಣ್ಯಸ್ಮರಣೋತ್ಸವ ಸಮಿತಿಯ ಆಶ್ರಯದಲ್ಲಿಹಮ್ಮಿಕೊಂಡ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಕಾರ್ಯಕ್ರಮದಲ್ಲಿಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ, ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಆದಮ್ಯ ಚೇತನ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದು ಎಂದಿಗೂ ಜೀವಂತವಾಗಿರಲಿವೆ. ಯುವ ಸಮೂಹ ಅವರ ಆದರ್ಶ ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಬಾಬುರಾವ ವಾಲಿ, ರಜನಿಕಾಂತ ಭೈರಗೊಂಡ, ಶಂಕರ ಗಡ್ಡದ ಅವರು ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾತ್ಮರು, ಸಂತರ ಹುಟ್ಟು ಸಾವಿನ ಮಧ್ಯೆ ಅವರ ಸೇವೆ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಮಹಾಂತಯ್ಯ ಸ್ವಾಮಿ ಹೆಬಳಿ, ಶರಣಪ್ಪ ಸಾವಳಗಿ, ಪರಮೇಶ್ವರ ಆಲೂರ, ಈರಣ್ಣಾ ಚರಪಳ್ಳಿ, ಗುರುಸಿದ್ದಯ್ಯ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಯುವಕರು, ಯುವತಿಯರು, ಹಿರಿಯರು ಭಾಗವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜ ಹಾಗೂ ಮಹಾಂತೇಶ್ವರ ಪುಣ್ಯಸ್ಮರಣೋತ್ಸವ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

