ಚಂದ್ರಮೌಳೇಶ್ವರ ಶಾಲೆ ವಾರ್ಷಿಕೋತ್ಸವ

Contributed bykakanakotekhedda@gmail.com|Vijaya Karnataka

ಎಚ್‌.ಡಿ.ಕೋಟೆಯ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಹಿರಿಯ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ನಡೆಯಿತು. ಹಿಂದುಳಿದ ತಾಲೂಕಿನ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 20 ವರ್ಷಗಳ ಹಿಂದೆ ಈ ಸಂಸ್ಥೆ ಆರಂಭವಾಯಿತು. ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಿಕ್ಷಣ ಸಂಸ್ಥೆಯು ಹಲವು ಗ್ರಾಮಗಳ ಮಕ್ಕಳಿಗೆ ಅನುಕೂಲವಾಗಿದೆ.

20th annual celebration of chandra mouleshwara school education talent and encouragement

ಚಂದ್ರಮೌಳೇಶ್ವರ ಶಾಲೆ ವಾರ್ಷಿಕೋತ್ಸವ

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಹಿಂದುಳಿದ ತಾಲೂಕಿನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು ಎನ್ನುವ ನಿಟ್ಟನಲ್ಲಿಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳು, ಎಚ್ .ಡಿ.ಕೋಟೆ ಪಟ್ಟಣದಲ್ಲಿ20 ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ತೆರೆದರು ಎಂದು ಚಕ್ಕೋಡನಹಳ್ಳಿ ಗ್ರಾಮದ ಮಾಜಿ ಪ್ರಧಾನ ಸಿ.ಎನ್ . ನರಸಿಂಹೇಗೌಡ ತಿಳಿಸಿದರು.

ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಹಿರಿಯ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಇಲ್ಲಿಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದರಿಂದ ಚಾಕಹಳ್ಳಿ, ಚಕ್ಕೋಡನಹಳ್ಳಿ, ಬೂದನೂರು ಮುಂತಾದ ಹತ್ತಾರು ಗ್ರಾಮಗಳಲ್ಲಿರುವ ಮಕ್ಕಳಿಗೆ ಇಲ್ಲಿಶಿಕ್ಷಣ ಪಡೆಯಲು ಅನುಕೂಲವಾಗಿದೆ. ಇದಲ್ಲದೆ ಮಾದಾಪುರ ಮತ್ತು ಆಲನಹಳ್ಳಿ ಗ್ರಾಮದಲ್ಲಿರುವ ಸಂಸ್ಥೆಯ ಶಾಲೆಗಳು ಕೂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ,’’ ಎಂದರು.

ಎಚ್ .ಡಿ.ಕೋಟೆ ಕ್ಲಸ್ಟರ್ ಸಿಆರ್ ಪಿ ದೀಪಾ ಮಾತನಾಡಿ, ‘‘ಶಾಲೆಗಳಲ್ಲಿನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮಗಳು, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊತತರಲು ಸಹಕಾರ ಕೊಡುತ್ತವೆ. ಪ್ರತಿಯೊಂದು ಮಗುವಿನಲ್ಲೂಪ್ರತಿಭೆ ಇದ್ದೇ ಇರುತ್ತದೆ. ಪ್ರತಿಭೆ ಇಲ್ಲದ ಮಗುವೇ ಇಲ್ಲ. ಆದರೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಮತ್ತು ಪೋಷಕರು ಹೊರತರಬೇಕು,’’ ಎಂದರು.

ಬಹುಮಾನ:

ಪಠ್ಯೇತರ ಚಟುವಟಿಕೆಗಳಲ್ಲಿವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ಸಾಲಿನಲ್ಲಿ10ನೇ ತರಗತಿಯಲ್ಲಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.

ಪುರಸಭಾ ಮಾಜಿ ಅದ್ಯಕ್ಷರಾದ ಅನಿತಾ ನಿಂಗನಾಯಕ, ಸರೋಜಮ್ಮ, ತೋಟಗಾರಿಕೆ ರೈತರ ಸಂಘದ ಅಧ್ಯಕ್ಷ ನಂದೀಶ್ , ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸದಸ್ಯ ಬಿ.ಎಸ್ . ಮಂಜುನಾಥ್ , ಬಿಆರ್ ಟಿ ಕೇಂದ್ರದ ಎ.ಎಸ್ . ಮಹದೇವ್ , ಎಂ.ಎಸ್ . ಗಿರೀಶ್ ಮೂರ್ತಿ, ಗ್ರಾ.ಪಂ. ಸದಸ್ಯ ಲೋಕೇಶ್ , ಕೆಂಡಗಣ್ಣಸ್ವಾಮಿ, ಚಂದ್ರಮೌಳೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗುರುಸ್ವಾಮಿ, ಮಹದೇವಸ್ವಾಮಿ (ಪ್ರೌಢಶಾಲಾ) ಇತರರಿದ್ದರು.

ಪೋಟೋ ಇದೆ;ಋ್ಗಖ14ಏಈಓ1ಇ

ಎಚ್ .ಡಿ.ಕೋಟೆ ಪಟ್ಟಣದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಹಿರಿಯ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಿ.ಎನ್ . ನರಸಿಂಹೇಗೌಡ ಮತ್ತಿತರರು ಉದ್ಘಾಟಿಸಿದರು.