ಸ್ವಾಮಿ ವಿವೇಕಾನಂದ ಜಯಂತಿ
ಆಧುನಿಕ ಯುಗದ ಶ್ರೇಷ್ಠ ಸಂತ
ವಿಕ ಸುದ್ದಿಲೋಕ ಗುಳೇದಗುಡ್ಡ
‘‘ಸ್ವಾಮಿ ವಿವೇಕಾನಂದರು ಆಧುನಿಕ ಯುಗದ ಶ್ರೇಷ್ಠ ಸಂತರಾಗಿದ್ದು, ಯುವಕರು ದುಶ್ಚಚಟಗಳ ದಾಸರಾಗದೇ ವಿವೇಕಾನಂದರ ಆದರ್ಶ ಅಳವಡಿಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು’’ ಎಂದು ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಭಾರತೀಯ ಪರಿಷತ್ ವಿದ್ಯಾರ್ಥಿ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಭಾಗ ಸಂಚಾಲಕ ಪ್ರಥಮೇಶ ವಾಘಮೋಡೆ, ತಾಲೂಕು ಸಂಚಾಲಕ ಅಪ್ಪುರಾಜ್ ಚವಾಣ, ನಗರ ಕಾರ್ಯದರ್ಶಿ ಈರಣ್ಣ ಹಡಪದ, ಮಂಜುಳಾ ಚಮಚಿ, ದೀಪಕ ರಾಠೋಡ್ , ಅಭಿಷೇಕ ಸರಗಣಾಚಾರಿ, ಆಕಾಶ ಚಂದಾಪುರ, ನಾಗರತ್ನ ರಂಜನಗಿ, ಬಸವರಾಜ ಚವಾಣ, ಸಂಜನಾ ರೂಡಗಿ, ಸುನೀತಾ ದಂಡಿನ್ , ಸಂಜನಾ ರಂಜನಗಿ, ಭಾರತಿ ಬಾಪುರಿ, ಶಂಕ್ರಮ್ಮ ಮುರಗೋಡ, ಸಂಗೀತಾ ಶಿರೂರ, ವಂದನಾ ಕಂಠಿ, ಕೀರ್ತಿ ಶಹಾಪುರ, ಸೌಂದರ್ಯ ಆರುಟಗಿ ಮತ್ತಿತರರಿದ್ದರು.
ನಗರದಲ್ಲೆಡೆ ಪಂಜಿನ ಮೆರವಣಿಗೆ ನಡೆಯಿತು.
ಪೋಟೊ:14ಜಿಎಲ್ ಡಿ-2
ಗುಳೇದಗುಡ್ಡ ಪಟ್ಟಣದಲ್ಲಿರಾಷ್ಟ್ರೀಯ ಯುವ ದಿನಾಚರಣೆಯ ಸಾನ್ನಿಧ್ಯ ವಹಿಸಿ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿದರು.

