ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯ
ವಿಕ ಸುದ್ದಿಲೋಕ ಗಂಗಾವತಿ
ತಾಲೂಕಿನ ಢಣಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ನಗರದ ಅಬಕಾರಿ ಇಲಾಖೆ ಕಚೇರಿ ಎದುರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಸದಸ್ಯ ಫಕೀರಪ್ಪ ಮಾತನಾಡಿ, ‘‘ ಹೆಬ್ಬಾಳ, ಹೆಬ್ಬಾಳ ಕ್ಯಾಂಪ್ , ಮಾರುತಿ ನಗರ, ಮಜ್ಜಿಗೆ ಕ್ಯಾಂಪ್ ಗಳಲ್ಲಿಸುಮಾರು ವರ್ಷಗಳಿಂದ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು, ವಯಸ್ಕರು ಮದ್ಯ ವ್ಯಸನಕ್ಕೆ ದಾಸರಾಗಿದ್ದಾರೆ. ಕೂಲಿ ಕೆಲಸ ಬಿಟ್ಟು ಮದ್ಯ ಸೇವಿಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ,’’ ಎಂದರು.
‘‘ಮದ್ಯ ಮುಕ್ತ ಗ್ರಾಮಗಳನ್ನಾಗಿ ಮಾಡಲು ಈಗಾಗಲೇ ಹೆಬ್ಬಾಳ ಮಠದ ಶ್ರೀಗಳಿಂದ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು,’’ ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಭರಮಪ್ಪ, ಈ.ಚಿದಾನಂದಪ್ಪ, ವೀರೇಶ, ಪಿ.ಅಯ್ಯಪ್ಪ, ಶಿವಕುಮಾರ, ರೋಷನ್ ಜಮೀರ್ , ಲಿಂಗೇಶ್ , ತಿಪ್ಪಣ್ಣ, ಶರಣಪ್ಪ ಕೋಟೆ, ಹನುಮಂತ, ನಾಗಮ್ಮ, ಹುಲಿಗೆಮ್ಮ, ಲಿಂಗಮ್ಮ, ಬೀರಪ್ಪ ಹಾಗೂ ಇತರರಿದ್ದರು.
ಕೆಪಿಎಲ್ 14ಸಿಎಂ,07.
ಗಂಗಾವತಿ ತಾಲೂಕಿನ ಢಣಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಗಂಗಾವತಿ ನಗರದ ಅಬಕಾರಿ ಇಲಾಖೆಯ ಕಚೇರಿ ಎದುರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

