ವಿಕ ಸುದ್ದಿಲೋಕ ಚಿಂತಾಮಣಿ
2025-26ನೇ ಸಾಲಿನ ಡಿಸೆಂಬರ್ ಮತ್ತು ಜನವರಿಯಲ್ಲಿನಡೆದ ಬಿ.ಎಡ್ ಪದವಿಯ 2ನೇ ಸೆಮಿಸ್ಟರ್ ಪರೀಕ್ಷೆಯಲ್ಲಿನಗರದ ವಿಕ್ರಂ ಬಿಎಡ್ ಕಾಲೇಜಿಗೆ 100% ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.
ಕೆ.ಆರ್ . ಸಂಧ್ಯಾ 94.33%, ಕೆ.ವಿ. ವೀಣಾ 93.66%, ಸಿ.ವಿ. ಯಶಸ್ವಿನಿ 93.5%, ಹನುಮಂತ 93.33%, ಸ್ವಾತಿ ಬರಮು ಬಂಗಿ 93.33% ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ವೇಳೆ ಕಾಲೇಜಿನ ಮುಖ್ಯಸ್ಥರಾದ ಸಿ.ಎನ್ . ನರಸಿಂಹರೆಡ್ಡಿ ಮಾತನಾಡಿ, ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ತಮ್ಮ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿರಲಿ, ಉನ್ನತ ಸ್ಥಾನಮಾನ ಆಲಂಕರಿಸಿ ಎಂದು ಶುಭ ಹಾರೈಸಿದರು.
ಈ ವೇಳೆ ಲಕ್ಷ್ಮಿ ವಿದ್ಯಾಸಂಸ್ಥೆಗಳ ಖಜಾಂಚಿ ಡಾ. ಎನ್ . ವಿಕ್ರಮ್ , ಸಿಇಒ ಪ್ರಿಯಾಂಕ, ಪ್ರಾಂಶುಪಾಲ ಡಿ.ವಿ. ವೆಂಕಟರಮಣರೆಡ್ಡಿ ಸೇರಿದಂತೆ ಉಪನ್ಯಾಸಕರು ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಬಿನಂಧಿಸಿದರು.
ಪೋಟೊ ಚಿತ್ರ 13ಸಿಎಂವೈ1
ಬಿ.ಎಡ್ ಪದವಿಯಲ್ಲಿಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು.

