ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ

Contributed byjagadishjodubeeti@gmail.com|Vijaya Karnataka

ಗೋಣಿಕೊಪ್ಪದ ಪ್ರಾಥಮಿಕ ಶಾಲೆಯಲ್ಲಿಕ್ಲಸ್ಟರ್‌ ಮಟ್ಟದ ಕಲಿಕಾ ಹಬ್ಬ ನಡೆಯಿತು. ಎಂಟು ಶಾಲೆಗಳ ವಿದ್ಯಾರ್ಥಿಗಳು ತಮ್ಮ ಕಲಿಕೆಗಳನ್ನು ಪ್ರದರ್ಶಿಸಿದರು. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಕಲಿಕಾ ಹಬ್ಬಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚಾಲನೆ ನೀಡಿದರು. ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೃಜನಶೀಲತೆ ಮತ್ತು ಪ್ರತಿಭೆಗಳನ್ನು ಹೊರತರುವ ವೇದಿಕೆಯಾಯಿತು.

learning fest new opportunities to nurture childrens creativity

-ಗೋಣಿಕೊಪ್ಪದಲ್ಲಿಕಾರ್ಯಕ್ರಮ | ಎಂಟು ಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಶನ

ವಿಕ ಸುದ್ದಿಲೋಕ ಗೋಣಿಕೊಪ್ಪ

ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು.

ಎಂಟು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲಿಕೆಗಳನ್ನು ಪ್ರದರ್ಶಸಿ ಬಹುಮಾನ ಪಡೆದರು.

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಕಲಿಕಾ ಹಬ್ಬಕ್ಕೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಚಾಲನೆ ನೀಡಿದರು.

ನಂತರ ಮಾತನಾಡಿದ ಗಣಪತಿ, ‘‘ಮಕ್ಕಳ ಮುಕ್ತ ಕಲಿಕೆಯ ವಾತಾವರಣಕ್ಕೆ ಅನುಕೂಲಕರವಾಗಿ ಕಲಿಕಾ ಹಬ್ಬವನ್ನು ಸರಕಾರ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಮಕ್ಕಳೆಡೆಗೆ ತಲುಪಿಸುವ ವ್ಯವಸ್ಥೆಯನ್ನು ಸಂಭ್ರಮವಾಗಿಸುವ ಮೂಲಕ ಮಕ್ಕಳಲ್ಲಿಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸುವಲ್ಲಿಕಾರ್ಯಕ್ರಮ ಆಯೋಜನೆಯಾಗಿರುವುದು ಶ್ಲಾಘನೀಯ,’’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಮಾತನಾಡಿ, ‘‘ಮಕ್ಕಳಲ್ಲಿಸೃಜನಶೀಲತೆಯನ್ನು ಹುಟ್ಟು ಹಾಕುವ ಸಲುವಾಗಿ ಕಲಿಕಾ ಹಬ್ಬ ಆಚರಣೆ ಮಾಡಲಾಗುತ್ತಿದೆ. ಮಕ್ಕಳಲ್ಲಿಅಡಗಿರುವ ಅಗಾಧ ಪ್ರತಿಭೆಗಳು ಹೊರಬಂದು ಗುರುತಿಸಿಕೊಳ್ಳುವ ವೇದಿಕೆಯಾಗುತ್ತಿದೆ,’’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ‘‘ಮಕ್ಕಳಲ್ಲಿಕಲಿಯುವ ಗುಣಗಳನ್ನು ಹೆಚ್ಚಿಸುವ ಪ್ರಯೋಗಾತ್ಮಕ ಕಾರ್ಯಕ್ರಮಗಳು ಸರಕಾರದ ಚಿಂತನೆಯ ಯೋಜನೆಗಳಾಗಿವೆ. ಈ ಕಾರ್ಯಕ್ರಮಗಳನ್ನು ಶಿಕ್ಷಕರು ಮಕ್ಕಳ ಕಡೆ ತಲುಪಿಸುವ ಪ್ರಯತ್ನ ಸಾಹಸಮಯವಾಗಿದೆ,’’ ಎಂದರು.

ಗ್ರಾಪಂ ಸದಸ್ಯ ಬಿ.ಎನ್ .ಪ್ರಕಾಶ್ , ಸದಸ್ಯೆ ಕೊಂಣಿಯಂಡ ಬೋಜಮ್ಮ ಮತ್ತು ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡಬೀಟಿ ಮಾತನಾಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸತೀಶ್ .ಬಿ.ಆರ್ , ಎಸ್ ಡಿಎಂಸಿ ಸಮಿತಿ ಉಪಾಧ್ಯಕ್ಷೆ ದಿವ್ಯಾ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಾಜರಿದ್ದರು.

ಪೋಟೋ : 13 ಜಿ.ಕೆ.ಎಲ್ 01:

ಗೋಣಿಕೊಪ್ಪದ ಪ್ರಾಥಮಿಕ ಶಾಲೆಯಲ್ಲಿನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಗಣ್ಯರು ಚಾಲನೆ ನೀಡಿದರು.