ತಾಯಿಯ ತಂಗಿ ಮಗನಿಂದಲೇ ಮಗೆ ಕನ್ನ

Contributed byadarshkodi15@gmail.com|Vijaya Karnataka

ದೊಡ್ಡಬಳ್ಳಾಪುರದಲ್ಲಿ ತಾಯಿಯ ತಂಗಿ ಮಗನೇ ಮನೆಯಲ್ಲಿ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾನೆ. ಯಲಹಂಕದ ದರ್ಶನ್ ಎಂಬಾತ ಬಂಧಿತ ಆರೋಪಿ. ಸುಮಾರು 110 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕದ್ದ ಒಡವೆಯನ್ನು ವಶಪಡಿಸಿಕೊಂಡಿದ್ದಾರೆ. ದೂರುದಾರರಾದ ದೀಕ್ಷಾ ಅವರಿಗೆ ಚಿನ್ನಾಭರಣವನ್ನು ಹಸ್ತಾಂತರಿಸಲಾಗಿದೆ.

jewelry worth lakhs stolen by mothers sisters son

ತಾಯಿಯ ತಂಗಿ ಮಗನಿಂದಲೇ ಮಗೆ ಕನ್ನ

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು | ಕದ್ದ ಒಡವೆಯೊಂದಿಗೆ ಆರೋಪಿ ಪೊಲೀಸರ ವಶಕ್ಕೆ

ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ : ತಾಯಿಯ ತಂಗಿ ಮಗನೇ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಸಮೀಪದ ದೀಕ್ಷಾ ಎಂಬಾಕೆ ಮನೆಯಲ್ಲಿ2025ರ ನ.25ರಂದು ನಡೆದಿತ್ತು.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರ ನೇತೃತ್ವದ ನಾರಾಯಣಸ್ವಾಮಿ, ಹರೀಶ್ ,

ಸುನೀಲ್ , ಸಚಿನ್ , ಪ್ರವೀಣ್ , ಫೈರೋಜ್ , ಗಣಪತಿ ಪೊಲೀಸ್ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಕದ್ದ ಮಾಲನ್ನು ವಶಕ್ಕೆ ಪಡೆಯುವಲ್ಲಿಯಶಸ್ವಿಯಾಗಿದ್ದಾರೆ. ಯಲಹಂಕ ಮೂಲದ ಪಾಲನಹಳ್ಳಿ ತೋಟದ ನಿವಾಸಿ ದರ್ಶನ್ (22) ಬಂಧಿತ ಆರೋಪಿ.

ಬಂಧಿತನಿಂದ 40 ಗ್ರಾಂ ತೂಕದ ಲಾಂಗ್ ಚೈನ್ , 20 ಗ್ರಾಂ ತೂಕದ ಉರಿ ಚೈನ್ , 35 ಗ್ರಾಂ ತೂಕದ ಮಾಂಗಲ್ಯ ಚೈನ್ , 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರವನ್ನು ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ದೂರುದಾರರಾದ ದೀಕ್ಷಾ ಅವರಿಗೆ ಹಸ್ತಾಂತರ ಮಾಡಿದರು.

ಏನಿದು ಘಟನೆ

ದೂರು ನೀಡಿದ್ದ ದೀಕ್ಷಾ ತಾಯಿಯ ತಂಗಿ ಮಗ ದರ್ಶನ್ ಯಲಹಂಕದ ಮಾರ್ಕೇಟಿನಲ್ಲಿಕೆಲಸ ಮಾಡಿಕೊಂಡಿರುತ್ತಾನೆ. ಅವನಿಗೆ ಹಣ ಬೇಕಾದಾಗ ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿಯಲ್ಲಿರುವ ದೂರುದಾರಳ ಮನೆಗೆ ಬಂದು ಕೇಳುತ್ತಿದ್ದನು. ಆಗ ಆಕೆ ಮನೆಯಲ್ಲಿನ ಮರದ ಕಬೋರ್ಡನಿಂದ ಹಣ ನೀಡುತ್ತಿದ್ದರು. ಆನಂತರ ಆಕೆಗೆ ಆರೋಪಿ ದರ್ಶನ್ ವಾಪಸ್ಸು ತಂದುಕೊಡುತ್ತಿದ್ದನು. ಎರಡು ಮೂರು ಬಾರಿ ದೂರುದಾರಳ ಬಳಿಯಿಂದ ದರ್ಶನ್ ಹಣ ಪಡೆದುಕೊಂಡು ಹೋಗಿ ಮತ್ತೆ ವಾಪಸ್ಸು ತಂದುಕೊಟ್ಟಿದ್ದ. ಆ ಹಣವನ್ನು ದೂರುದಾರಳು ಮತ್ತೆ ಬೀಗ ತೆಗೆದು ಮರದ ಕಬೋರ್ಡನಲ್ಲಿಇಡುತ್ತಿದ್ದರು. ಅದೇ ಕಬೋರ್ಡನಲ್ಲಿದೂರುದಾರಳ ಮದುವೆ ಸಮಯದಲ್ಲಿಖರೀದಿ ಮಾಡಿದ್ದ 40 ಗ್ರಾಂ ತೂಕದ ಲಾಂಗ್ ಚಿನ್ , 20 ಗ್ರಾಂ ತೂಕದ ಉರಿ ಚೈನ್ , 35 ಗ್ರಾಂ ತೂಕದ ಮಾಂಗಲ್ಯ ಚೈನ್ , 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರ ಇಡಲಾಗಿತ್ತು. ದೂರುದಾರೆ ದೀಕ್ಷಾ ಅವುಗಳನ್ನು ಅಕ್ಷಯ ತೃತೀಯ ದಿನದಂದು ಅಂದರೆ 2025ರ ಏ.30ರಂದು ಹಾಕಿಕೊಂಡು ಅದೇ ದಿನ ಸಂಜೆ ಆವುಗಳೆಲ್ಲಾವನ್ನು ತೆಗೆದು ಅದೇ ಕಬೋರ್ಡನಲ್ಲಿಟಿದ್ದರು. 2025ರ ನ.25ರ ಸಂಜೆ 5 ಗಂಟೆಗೆ ದೂರುದಾರಳು ಊರಿಗೆ ಹೋಗಲು ಮರದ ಕಬೋರ್ಡ ತೆಗದು ನೋಡಲಾಗಿ 40 ಗ್ರಾಂ ತೂಕದ ಲಾಂಗ್ ಚೈನ್ , 20 ಗ್ರಾಂ ತೂಕದ ಉರಿ ಚೈನ್ , 35 ಗ್ರಾಂ ತೂಕದ ಮಾಂಗಲ್ಯ ಚೈನ್ , 12 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಉಂಗುರ ನಾಪತ್ತೆ ಆಗಿತ್ತು. ಮನೆಯಲ್ಲಿನ ಸುಮಾರು 110 ಗ್ರಾಂ ತೂಕದ ಅಂದಾಜು ಮೌಲ್ಯ 12 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದರ್ಶನ್ ಕದ್ದಿರಬಹುದು ಎಂದು ಶಂಕಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ದೂರಿನ ಮೇರೆಗೆ ದರ್ಶನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.