ಬಲರಾಮನ ಸುಗ್ಗಿ ಹಬ್ಬ

Contributed bybabitha.salian@timesgroup.com|Vijaya Karnataka

ನಟ ವಿನೋದ್‌ ಪ್ರಭಾಕರ್‌ ಅಭಿನಯದ 'ಬಲರಾಮನ ದಿನಗಳು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರತಂಡ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಈ ಚಿತ್ರವು ರೌಡಿಸಂ ಕಥೆಯಾದರೂ, ಕುಟುಂಬ ಸಮೇತ ನೋಡಬಹುದಾಗಿದೆ. ನಟಿ ಪ್ರಿಯಾ ಆನಂದ್‌ ಮತ್ತು ನಿರ್ದೇಶಕ ಕೆ.ಎಂ ಚೈತನ್ಯ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ 'ಶುರು ಶುರು' ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

balrams suggi festival a special celebration of new season and sankranti festival

ಬಲರಾಮನ ಸುಗ್ಗಿ ಹಬ್ಬ

ಇಂಟ್ರೊ

ನಟ ವಿನೋದ್ ಪ್ರಭಾಕರ್ ಸೂರ್ಯನಂತೆ ತಮ್ಮ ಆ್ಯಕ್ಷನ್ ಪಥ ಬದಲಿಸಿ ‘ಬಲರಾಮನ ದಿನಗಳು’ ಚಿತ್ರದ ಮೂಲಕ ಫ್ಯಾಮಿಲಿ ಹೀರೊ ಆಗಲು ಸನ್ನದ್ಧರಾಗಿದ್ದಾರೆ. ಇದರಲ್ಲಿಅವರಿಗೆ ನಾಯಕಿಯಾಗಿರುವ ನಟಿ ಪ್ರಿಯಾ ಆನಂದ್ ಹಾಗೂ ನಿರ್ದೇಶಕ ಕೆ.ಎಂ ಚೈತನ್ಯ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದಾರೆ.

-ಕಿರಣ್ ಚಂದ್ರ

ಸ್ಯಾಂಡಲ್ ವುಡ್ ನಲ್ಲಿ‘ಆ ದಿನಗಳು’ ಎಂಬ ಕ್ಲಾಸ್ ಅಂಡರ್ ವರ್ಲ್ಡ್ ಸಿನಿಮಾ ನಿರ್ದೇಶನ ಮಾಡಿರುವ ಕೆ.ಎಂ ಚೈತನ್ಯರ ಇನ್ನೊಂದು ಭೂಗತ ಜಗತ್ತಿನ ಪಿರಿಯಾಡಿಕ್ ಡ್ರಾಮಾ ‘ಬಲರಾಮನ ದಿನಗಳು’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ನಮ್ಮೂರ ಸಂಪ್ರದಾಯದ ಜತೆಗೆ ಬೆಸೆದುಕೊಂಡಿರುವ ಕಥೆಗಳನ್ನು ಮನರಂಜನಾತ್ಮಕವಾಗಿ ನೀಡುತ್ತಿರುವ ಈ ಚಿತ್ರತಂಡ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಇದರಲ್ಲಿಬಲರಾಮನ ಪಾತ್ರದಲ್ಲಿರುವ ವಿನೋದ್ ಪ್ರಭಾಕರ್ , ನಾಯಕಿ ಪ್ರಿಯಾ ಆನಂದ್ , ನಿರ್ದೇಶಕ ಕೆ.ಎಂ ಚೈತನ್ಯ ಹಬ್ಬದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕೋಟ್ಸ್

ರೈತರಂತೆ ಸಿನಿಮಾದವರಿಗೂ ಚಿತ್ರ ಬಿಡುಗಡೆಯಾಗುವ ದಿನವೇ ಸಂಕ್ರಾಂತಿ. ತಿಂಗಳುಗಟ್ಟಲೆ ದುಡಿದು, ಫಸಲು ಕೈಗೆ ಬಂದಾಗ ಅವರು ಮಾಡುವ ಸುಗ್ಗಿಯಂತೆ ನಾವು ಸಿನಿಮಾವನ್ನು ಜನರ ಮಡಿಲಿಗೆ ಹಾಕಿದ ದಿನವೇ ಸಂಕ್ರಾಂತಿ. ನಮ್ಮ ‘ಬಲರಾಮನ ದಿನಗಳು’ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದ್ದು, ಹಬ್ಬದ ಜತೆಗೆ ಈ ಸಿನಿಮಾದ ಡಬಲ… ಖುಷಿ ನಮ್ಮದಾಗಿದೆ. ಇದು ರೌಡಿಸಂ ಕಥೆಯಾದರೂ, ಫ್ಯಾಮಿಲಿ ಸಮೇತ ನೋಡಬಹುದಾದ ಚಿತ್ರ. ಈ ಸಂಕ್ರಾಂತಿ ಹಬ್ಬಕ್ಕೆ ಇದನ್ನು ತೆರೆಗೆ ತರುವ ಯೋಜನೆ ಇತ್ತು. ಆದರೆ ಗ್ರಾಫಿಕ್ಸ್ ನಿಂದ ನಿಧಾನವಾಯಿತು. ನಾವು ಈಗಲೂ ಹಬ್ಬ ಆಚರಿಸುತ್ತವೆ, ಆದರೆ ನನ್ನ ತಂದೆ ಕಾಲದಲ್ಲಿದ್ದ ಸಂಭ್ರಮ ಈಗಿಲ್ಲ. ಮಕ್ಕಳಾಗಿದ್ದಾಗ ನಾವು ಸಂಭ್ರಮಿಸಿದ ಖುಷಿ ಈಗ ಕಣ್ಮರೆಯಾಗಿದೆ.

ವಿನೋದ್ ಪ್ರಭಾಕರ್ | ನಟ

ಕರ್ನಾಟಕದಲ್ಲಿಇದು ನನಗೆ ಮೊದಲ ಸಂಕ್ರಾಂತಿ. ಈ ಹಬ್ಬವನ್ನು ‘ಬಲರಾಮನ ದಿನಗಳು’ ಸಿನಿಮಾ ತಂಡದ ಜತೆಗೆ ಆಚರಿಸುತ್ತಿರುವುದು ಖುಷಿ ನೀಡಿದೆ. ಈ ಚಿತ್ರದಲ್ಲಿನನಗೆ ನಟಿಸಲು ಹೆಚ್ಚು ಅವಕಾಶ ಸಿಕ್ಕಿದೆ. ಇದರ ‘ಶುರು ಶುರು’ ಹಾಡಿಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯಿಂದ ಸಂತಸವಾಗಿದೆ.

ಪ್ರಿಯಾ ಆನಂದ್ | ನಟಿ

ಹೊಸ ಋುತು, ಹೊಸ ಹುಟ್ಟು, ಹುಮ್ಮಸ್ಸು, ಸಮೃದ್ದಿ, ಭರವಸೆಗಳ ಸಂಭ್ರಮವೇ ಸಂಕ್ರಾಂತಿ. ನಾನು ಚಿಕ್ಕವನಾಗಿದ್ದಾಗ ಅಜ್ಜಿ ಮನೆಯಲ್ಲಿಎಲ್ಲರೂ ಸೇರಿ ಸಂಭ್ರಮಿಸಿದ್ದು, ಮನೆ ಮನೆಗೆ ಅಮ್ಮನ ಜತೆಗೆ ಹೋಗಿ ಎಳ್ಳು, ಬೆಲ್ಲಹಂಚಿದ್ದು, ವಿವಿಧ ರೀತಿಯ ಕಲ್ಲುಸಕ್ಕರೆಗಳ ಸವಿ ನೆನಪು ಈಗಲೂ ಸ್ಮರಣೀಯ. ಬೆಂಗಳೂರು ಮರೆತಿರುವ ಆ ದಿನಗಳನ್ನು ನೆನಪಿಸುವ ‘ಬಲರಾಮನ ದಿನಗಳು’ ಚಿತ್ರದಲ್ಲಿಆಗಿನ ಭೂಗತ ಜಗತ್ತು, ರಾಜಕಾರಣ, ವ್ಯವಹಾರ ಮತ್ತು ಸಾಮಾಜಿಕ ಚಿತ್ರಣವಿದೆ. ಪ್ರೇಕ್ಷಕರಿಗೆ ಹತ್ತಿರವಾಗುವ ಎಲ್ಲಾಅಂಶಗಳು ಇದರಲ್ಲಿವೆ.

ಕೆ.ಎಂ ಚೈತನ್ಯ | ನಿರ್ದೇಶಕ