ಬ್ರಿಕ್ಸ್ 2026ರ ಲೋಗೊ, ವೆಬ್ ಸೈಟ್ ಬಿಡುಗಡೆ

Contributed byvijay.cheelange@timesgroup.com|Vijaya Karnataka

ಭಾರತವು 2026ರ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಧಿಕೃತ ವೆಬ್‌ಸೈಟ್ ಮತ್ತು ಲೋಗೋವನ್ನು ಬಿಡುಗಡೆ ಮಾಡಿದರು. ಜಾಗತಿಕ ಸವಾಲುಗಳನ್ನು ಎದುರಿಸಲು ಒಕ್ಕೂಟದ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಪ್ರಯತ್ನಿಸಲಿದೆ. ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷಗಳು ಪೂರೈಸಲಿವೆ. ಇದು ಉದಯೋನ್ಮುಖ ಮಾರುಕಟ್ಟೆಗಳಿಗೆ ಪ್ರಮುಖ ವೇದಿಕೆಯಾಗಿದೆ.

brics 2026 logo and official website released indias presidency of multinational alliance

ಹೊಸದಿಲ್ಲಿ: ಬದಲಾಗುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸುವ ಗುರಿಯೊಂದಿಗೆ ಭಾರತವು 10 ರಾಷ್ಟ್ರಗಳ ‘ಬ್ರಿP್ಸ… ಒಕ್ಕೂಟ’ದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ . ಜೈಶಂಕರ್ ಅವರು ಭಾರತದ ಅಧ್ಯಕ್ಷತೆಯಲ್ಲಿಜರುಗುವ ‘ಬ್ರಿP್ಸ… -2026ರ ’ ಅಧಿಕೃತ ವೆಬ್ ಸೈಟ್ ಮತ್ತು ಲೋಗೋವನ್ನು ಮಂಗಳವಾರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘‘ಬ್ರಿP್ಸ… ಅಧ್ಯಕ್ಷತೆಯು ಜಾಗತಿಕ ಕಲ್ಯಾಣವನ್ನು ಉತ್ತೇಜಿಸಲು ಸದಸ್ಯ ರಾಷ್ಟ್ರಗಳ ಸಾಮರ್ಥ್ಯವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತದೆ,’’ ಎಂದು ಹೇಳಿದರು. ‘‘ಜ.1ರಂದು ಬ್ರೆಜಿಲ್ ನಿಂದ ಭಾರತಕ್ಕೆ ಬ್ರಿಕ್ಸ್ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಸ್ತಾಂತರಧಿಗೊಂಡಿದೆ. 2012, 2016 ಮತ್ತು 2021ರ ನಂತರ ಭಾರತವು ಬ್ರಿP್ಸ… ಅಧ್ಯಕ್ಷತೆಧಿಯನ್ನು ವಹಿಸಿಕೊಳ್ಳುತ್ತಿರುವುದು ನಾಲ್ಕನೇ ಬಾರಿಯಾಗಿದೆ. 2026ರಲ್ಲಿಬ್ರಿP್ಸ… ಸ್ಥಾಪನೆ ಯಾಗಿ 20 ವರ್ಷಗಳು ಪೂರೈಸಲಿವೆ. ಈ ಅವಧಿಯಲ್ಲಿಈ ಒಕ್ಕೂಟವು ಉದಯೋನ್ಮುಖ ಮಾರುಧಿಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಸಹಕಾರ ನೀಡುವ ಪ್ರಮುಖ ವೇದಿಕೆಯಾಗಿ ವಿಕಸನಗೊಂಡಿದೆ,’’ ಎಂದು ಅವರು ತಿಳಿಸಿದರು.